ಎನ್ಟಿಆರ್ 95ನೇ ಜಯಂತೋತ್ಸವ

ಎನ್ಟಿಆರ್. ಇದು ತೆಲುಗರು ಎಂದೂ ಮರೆಯದ ಹೆಸರು. ದೇಶದ ರಾಜಕಾರಣದಲ್ಲೂ ಎನ್ಟಿಆರ್ ಹೆಜ್ಜೆ ಗುರುತನ್ನ ಯಾರೂ ಅಳಿಸೋಕೆ ಸಾಧ್ಯವಿಲ್ಲ. ಕಪ್ಪು ಬಿಳುಪಿನ ಯುಗದಲ್ಲಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಎನ್ಟಿಆರ್ ಮುಂದೆ ಸೃಷ್ಟಿಸಿದ್ದು ಇತಿಹಾಸ. ಮೇ 28ಕ್ಕೆ 1923ರಲ್ಲಿ ಆಂಧ್ರಪ್ರದೇಶದ ಗೋದಾವರಿಯ ಸಣ್ಣ ಹಳ್ಳಿಯಲ್ಲಿ ಜನಿಸಿದ ನಂದಮೂರಿ ತಾರಕ್ ರಾಮಾರಾವ್ ಮುಂದೆ ವಿಶ್ವವೇ ತಿರುಗಿ ನೋಡುವಂಥ ಸಾಧನೆ ಮಾಡಿದರು.
400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ, ಪ್ರೇಕ್ಷಕರನ್ನ ರಂಜಿಸಿದ ಎನ್ಟಿಆರ್, ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆಯನ್ನ ಬಳಸಿಕೊಂಡು ಪ್ರಾದೇಶಿಕ ಪಕ್ಷ ಕಟ್ಟಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಪಟ್ಟಕ್ಕೇರಿದರು. ಎನ್ಟಿಆರ್ ಇಂದು ನಮ್ಮೊಂದಿಗೆ ಇಲ್ಲದೇ ಇದ್ರೂ, ಅವರ ಸಿನಿಮಾಗಳು, ಅವರ ಜನಸೇವೆಯನ್ನ ಯಾರೂ ಮರೆಯೋದಿಲ್ಲ.
ಇಂದು ಎನ್ಟಿಆರ್ 95ನೇ ಜಯಂತೋತ್ಸವದ ಪ್ರಯುಕ್ತ ಕುಟುಂಬಸ್ಥರು ಸೇರಿದಂತೆ ತೆಲುಗು ಚಿತ್ರರಂಗದ ಗಣ್ಯರು, ಹೈದರಾಬಾದ್ನಲ್ಲಿ ಎನ್ಟಿಆರ್ ಘಾಟ್ಗೆ ಭೇಟಿಕೊಟ್ಟು ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಎನ್ಟಿರ್ ಪುತ್ರ ನಂದಮೂರಿ ಹರಿಕೃಷ್ಣ, ಮೊಮ್ಮಕ್ಕಳಾದ ಜ್ಯೂನಿಯರ್ ಎನ್ಟಿಆರ್, ಕಲ್ಯಾಣ್ ರಾಮ್ ಸಮಾಧಿಗೆ ಪೂಜೆ ಸಲ್ಲಿಸಿ, ಅವರ ಸಾಧನೆಯನ್ನ ಮೆಲುಕು ಹಾಕಿದರು.