Top

ಅಪ್ಪನಂತೆ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಮಗ

ಅಪ್ಪನಂತೆ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಮಗ
X

ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ ಅನ್ನೋ ಪಟ್ಟ ಗಿಟ್ಟಿಸಿಕೊಳ್ಳೋದು ಅಷ್ಟು ಸುಲಭದ ಮಾತಲ್ಲ. ಅಷ್ಟೇ ಯಾಕೆ ಸ್ಟಾರ್ ಅನಿಸಿಕೊಂಡು, ತನ್ನದೇ ಆದಂತಹ ಒಂದಷ್ಟು ದಾಖಲೆಗಳನ್ನ ಇತಿಹಾಸದ ಪುಟಗಳಲ್ಲಿ ದಾಖಲಾಗುವಂತೆ ಹೆಸರು ಮಾಡೋದು ಕೂಡ ಕಷ್ಟಸಾಧ್ಯ. ಹಾಗಂತ ಪ್ರತಿಭೆ ಅನ್ನೋದು ಯಾರಪ್ಪನ ಸ್ವತ್ತೂ ಅಲ್ಲ. ಯಾವುದೇ ಕಲಾವಿದನಿಗೆ ಶ್ರದ್ಧೆ ಮತ್ತು ಆಸಕ್ತಿಯೊಂದಿದ್ದರೆ, ಆತ ಇಟ್ಟ ಗುರಿ ಮುಟ್ಟೋದ್ರಲ್ಲಿ ಅನಿಮಾನವೇ ಇಲ್ಲ.

ಸೌತ್ ಸಿನಿದುನಿಯಾದಲ್ಲಿ ಅತೀ ಕಡಿಮೆ ಕಾಲಾವಧಿಯಲ್ಲಿ ಬಹುದೊಡ್ಡ ಹೆಸರು ಮಾಡಿದ ಸ್ಟಾರ್ ಅಂದ್ರೆ ಅದು ದುಲ್ಕರ್ ಸಲ್ಮಾನ್. ಹೌದು.. ಮಲಯಾಳಂನ ಸೂಪರ್ ಸ್ಟಾರ್ ಮಮ್ಮುಟ್ಟಿ ಮಗ ಈ ದುಲ್ಕರ್ ಸಲ್ಮಾನ್. ಮಮ್ಮುಟ್ಟಿ ಮಾಲಿವುಡ್​ನಲ್ಲಿ ಮಾಡಿದ ಮೋಡಿ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದೀಗ ಅಪ್ಪನ ಹಾದಿಯಲ್ಲೇ ದುಲ್ಕರ್ ಕೂಡ ಸೂಪರ್ ಸ್ಟಾರ್ ಆಗಿ ಕಮಾಲ್ ಮಾಡ್ತಿದ್ದಾರೆ.

2012ರಲ್ಲಿ ತೆರೆಕಂಡ ಆ್ಯಕ್ಷನ್ ಡ್ರಾಮಾ ಸೆಕೆಂಡ್ ಶೋ ಚಿತ್ರದ ಮೂಲಕ ಬಣ್ಣದಲೋಕಕ್ಕೆ ಕಾಲಿಟ್ಟ ದುಲ್ಕರ್, ಚೊಚ್ಚಲ ಚಿತ್ರದಲ್ಲೇ ಬೆಸ್ಟ್ ಡೆಬ್ಯೂಟ್ ಫಿಲ್ಮ್ ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ನಟನೆ ರಕ್ತಗತವಾಗಿ ಬಂದದ್ದರಿಂದ ಸಿನಿಪ್ರಿಯರ ಮನಗೆಲ್ಲೋಕೆ ದುಲ್ಕರ್​ಗೆ ಹೆಚ್ಚಿನ ಸಮಯ ಹಿಡಿಯಲಿಲ್ಲ. ತಂದೆಯಂತೆ ತಾನು ಕೂಡ ನೀರು ಕುಡಿದಷ್ಟೇ ಸಲೀಸಾಗಿ ಪಾತ್ರಗಳಿಗೆ ಜೀವ ತುಂಬಿ ಭೇಷ್ ಅನಿಸಿಕೊಂಡರು.

ಯೆಸ್, ದುಲ್ಕರ್ ಸಲ್ಮಾನ್ ಆರು ವರ್ಷದಲ್ಲಿ ಮಾಡಿದ ಸಿನಿಮಾಗಳ ಸಂಖ್ಯೆ ಬರೋಬ್ಬರಿ 27. ಅದ್ರಲ್ಲಿ ಬಹುತೇಕ ಬ್ಲಾಕ್ ಬಸ್ಟರ್ ಹಿಟ್​ಗಳೇ ಇವೆ. ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಸಿನಿಪ್ರಿಯರನ್ನ ರಂಜಿಸ್ತಾ ಬರ್ತಿರೋ ದುಲ್ಕರ್, ಮಲಯಾಳಂ ಗಡೆಯಾಚೆಗೂ ಅಭಿಮಾನಿ ಬಳಗವನ್ನ ಸಂಪಾದಿಸಿಕೊಂಡಿದ್ದಾರೆ. ಗಾಡ್ ಫಾದರ್ ಇದ್ದು ಅದನ್ನ ಸದುಪಯೋಗಪಡಿಸಿಕೊಂಡಂತಹ ಅತ್ಯದ್ಭುತ ಪ್ರತಿಭೆ ಅನಿಸಿಕೊಂಡಿದ್ದಾರೆ.

ದುಲ್ಕರ್ ಸಲ್ಮಾನ್ ನಟಿಸಿದ ಉಸ್ತಾದ್ ಹೋಟೆಲ್, ಬೆಂಗಳೂರು ಡೇಸ್, ಚಾರ್ಲಿ, ಕಲಿ, ಸೋಲೋ, ಕಾಮ್ರೆಡ್ ಇನ್ ಅಮೆರಿಕಾ ಹೀಗೆ ಒಂದೊಂದು ಸಿನಿಮಾ ಕೂಡ ಒಂದೊಂದು ದಾಖಲೆ ಬರೆದಿವೆ. ಅದ್ರಲ್ಲೂ ಬೆಂಗಳೂರು ಡೇಸ್ ಬಗ್ಗೆ ಹೇಳಲೇಬೇಕು. ನಮ್ಮ ಬೆಂಗಳೂರಿಗರೇ ನೋಡದಂತಹ ಬ್ಯುಟಿಫುಲ್ ಲೊಕೇಷನ್ಸ್​ನ ಈ ಸಿನಿಮಾದಲ್ಲಿ ತೋರಿಸೋ ಮೂಲಕ ದುಲ್ಕರ್ ಧೂಳೆಬ್ಬಿಸಿದ್ದಾರೆ.

ಮಹಾನಟಿ ಸಿನಿಮಾ ಮೂಲಕ ಪಕ್ಕದ ಟಾಲಿವುಡ್​ಗೂ ಎಂಟ್ರಿ ಕೊಟ್ಟ ದುಲ್ಕರ್, ಅಲ್ಲಿ ಜೆಮಿನಿ ಗಣೇಶನ್ ಪಾತ್ರದಲ್ಲಿ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಮಹಾನಟಿ ಸಿನಿಮಾ ಯಾವ ರೇಂಜ್​ಗೆ ಸದ್ದು ಮಾಡ್ತಿದೆ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಇದೀಗ ಕರ್ವಾನ್ ಅನ್ನೋ ಸಿನಿಮಾ ಮಾಡ್ತಿರೂ ದುಲ್ಕರ್, ಅದ್ರಿಂದ ಬಾಲಿವುಡ್​ಗೂ ಪಾದಾರ್ಪಣೆ ಮಾಡ್ತಿದ್ದಾರೆ. ಈಗಾಗ್ಲೇ ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಗುರ್ತಿಸಿಕೊಂಡಿರೋ ದುಲ್ಕರ್, ಸದ್ಯ ಹಿಂದಿಗೂ ಎಂಟ್ರಿ ಕೊಡ್ತಿದ್ದಾರೆ. ಇನ್ನು ಬಿಟೌನ್​ನಲ್ಲಿರೂ ಸಲ್ಮಾನ್ ಖಾನ್​ಗೆ ಈ ದುಲ್ಕರ್ ಸಲ್ಮಾನ್ ಫಯಟ್ ಕೊಡ್ತಾರೆ ಅನ್ನೋದು ಹಲವರ ಲೆಕ್ಕಾಚಾರ. ಅದೇನೇ ಇರಲಿ, ಸಲ್ಮಾನ್ ಹೆಸರು ಇರೋರೆಲ್ಲಾ ದೊಡ್ಡ ಮಟ್ಟಕ್ಕೆ ಸೌಂಡ್ ಮಾಡ್ತಾರೆ ಅನ್ನೋದು ಮತ್ತೊಮ್ಮೆ ಪ್ರೂವ್ ಆಯ್ತು. ಸದ್ಯ ಯೂತ್ ಐಕಾನ್ ಆಗಿ ಮಿಂಚ್ತಿರೋ ಮಿಸ್ಟರ್ ಹ್ಯಾಂಡ್ಸಮ್ ದುಲ್ಕರ್​ಗೆ ಲೇಡಿ ಫ್ಯಾನ್ ಫಾಲೋಯಿಂಗ್ ಕೂಡ ಜೋರಿದೆ. ಇವ್ರ ಸಕ್ಸಸ್​ಫುಲ್ ಜರ್ನಿ ಮತ್ತಷ್ಟು ಸುಗಮವಾಗಿ ಸಾಗಲಿ ಅಂತ ಹಾರೈಸೋಣ.

Next Story

RELATED STORIES