Top

ಆಫೀಸರ್ ಚಿತ್ರಕ್ಕೂ, ಕನ್ನಡಿಗರಿಗೂ ಇರೋ ನಂಟೇನು ಗೊತ್ತಾ..?

ಆಫೀಸರ್ ಚಿತ್ರಕ್ಕೂ, ಕನ್ನಡಿಗರಿಗೂ ಇರೋ ನಂಟೇನು ಗೊತ್ತಾ..?
X

ಅಕ್ಕಿನೇನಿ ನಾಗಾರ್ಜುನ್ ಅಭಿನಯದ ತೆಲುಗು ಚಿತ್ರ ಆಫೀಸರ್ ಇದೇ ಜೂನ್ 1ಕ್ಕೆ ವರ್ಲ್ಡ್​ ವೈಡ್ ರಿಲೀಸ್ ಆಗ್ತಿದೆ. ಇಲ್ಲಿ ಕಿಂಗ್ ನಾಗಾರ್ಜುನ್ ಮುಂಬೈ ಕ್ರೈಂ ಬ್ರಾಂಚ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಬಿಂದಾಸ್ ಆ್ಯಕ್ಟ್ ಮಾಡಿದ್ದಾರೆ. ಟ್ರೈಲರ್ ಮತ್ತು ಮೇಕಿಂಗ್ ಸಖತ್ ಕ್ರೇಜ್ ಹುಟ್ಟಿಸಿದ್ದು, ಪ್ರತೀ ಫ್ರೇಮ್​ನಲ್ಲೂ ಟಿಪಿಕಲ್ ವರ್ಮಾ ಮೇಕಿಂಗ್ ಸ್ಟೈಲ್ ಎದ್ದು ಕಾಣ್ತಿದೆ.

ಇಷ್ಟಕ್ಕೂ ಆರ್​ಜಿವಿ ಈ ಸಿನಿಮಾ ಮಾಡೋಕೆ ಕಾರಣ, ಕನ್ನಡದ ಪೊಲೀಸ್ ಆಫೀಸರ್ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಹೌದು, ಕರ್ನಾಟಕದಿಂದ ಮುಂಬೈಗೆ ಹೋಗಿ ಅಲ್ಲಿ ದೊಡ್ಡ ಹೆಸರು ಮಾಡಿದಂತಹ ಕ್ರೈಂ ಬ್ರಾಂಚ್ ಐಪಿಎಸ್ ಆಫೀಸರ್ ಕೆಎಂ ಪ್ರಸನ್ನ ಕುರಿತಾದ ಸಿನಿಮಾ ಇದು. ಇದನ್ನ ಖುದ್ದು ಆರ್​ಜಿವಿ ಅವ್ರೇ ಟ್ವೀಟ್ ಮಾಡೋ ಮೂಲಕ ಬಹಿರಂಗ ಪಡಿಸಿದ್ದಾರೆ.

police officer K.M.Prasanna

ಮುಂಬೈನಲ್ಲಿ ನಡೆಯೋ ಕ್ರೈಂನ ಮಟ್ಟ ಹಾಕೋ ಆಫೀಸರ್ ಪಾತ್ರದಲ್ಲಿ ಅಕ್ಕಿನೇನಿ ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಅಕ್ಕಿನೇನಿಗೆ ಮೈರಾ ಸರೀನಾ ಸಾಥ್ ಕೊಟ್ಟಿದ್ದು, ಔಟ್ ಅಂಡ್ ಔಟ್ ಮಾಸ್ ಎಂಟ್ರಟೈನರ್ ಸಿನಿಮಾ ಅನ್ನೋದು ಪಕ್ಕಾ ಆಗಿದೆ. ಆರ್​ಜಿವಿ ಈ ಸಿನಿಮಾನ ನಿರ್ದೇಶಿಸುವುದರ ಜೊತೆಗೆ ನಿರ್ಮಾಣ ಕೂಡ ಮಾಡಿದ್ದು, ಕ್ಯೂರಿಯಾಸಿಟಿ ಜೊತೆ ಗೆಲ್ಲೋ ಸೂಚನೆ ಕೊಟ್ಟಿದೆ.

ಇಲ್ಲಿ ಆಫೀಸರ್ ಅಂದಾಕ್ಷಣ ಬರೀ ಹೊಡೀಬಡಿ ಕಥೆ ಇಲ್ಲ. ಅದ್ರ ಜೊತೆ ತಂದೆ-ಮಗಳ ಅನುಬಂಧದ ಕಥೆಯಿದೆ. ಬಾವನಾತ್ಮಕವಾಗಿ ನಿಮ್ಮನ್ನ ಕಟ್ಟಿಹಾಕೋ ಅಂತಹ ಸಾಹಸಕ್ಕೆ ವರ್ಮಾ ಕೈಹಾಕಿದ್ದಾರೆ. ರವಿ ಶಂಕರ್ ಸಂಗೀತದ ಹಾಡುಗಳು ಸಂಥಿಂಗ್ ಸ್ಪೆಷಲ್ ಅನಿಸಿದ್ದು, ಬೇರೆಯದ್ದೇ ಫೀಲ್ ಕೊಡ್ತಿವೆ.

ಅದೇನೇ ಇರಲಿ, ಆರ್​ಜಿವಿ ಆಫೀಸರ್ ಹಿಂದೆ ನಮ್ಮ ಕನ್ನಡದ ದಕ್ಷ ಪೊಲೀಸ್ ಆಫೀಸರ್ ಇದ್ದಾರೆ ಅನ್ನೋದೇ ನಮಗೆ ಹೆಮ್ಮೆಯ ವಿಚಾರ. ಇನ್ನು ಕನ್ನಡಿಗರಿಗೇ ಗೊತ್ತಿಲ್ಲದಿರೋ ಆ ದಕ್ಷ ಪೊಲೀಸ್ ಆಫೀಸರ್ ಕೆಎಂ ಪ್ರಸನ್ನ ಲೈಫ್ ಸ್ಟೋರಿ ತಿಳಿದುಕೊಳ್ಳೋಕೆ ಕನ್ನಡಿಗರು ಕೂಡ ಕೌತುಕರಾಗಿದ್ದಾರೆ. ಇನ್ನು ಈ ಸಿನಿಮಾ ಕರ್ನಾಟಕದಲ್ಲೂ ದೊಡ್ಡ ಭರವಸೆ ಮೂಡಿಸಿದ್ದು, ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದು ಶುಕ್ರವಾರ ಗೊತ್ತಾಗಲಿದೆ.

Next Story

RELATED STORIES