ಅಣ್ಣಾವ್ರ ಅಭಿಮಾನಿ ಚಂದನ್ಗೆ ಶ್ರದ್ಧಾಂಜಲಿ ಸಲ್ಲಿಸಿದ ರಾಘಣ್ಣ

X
TV5 Kannada28 May 2018 11:03 AM GMT
ಕೆಲದಿನಗಳ ಹಿಂದೆ ಭೀಕರ ಅಪಘಾತದಲ್ಲಿ ಮೃತಪಟ್ಟ ಕಿರುತೆರೆ ನಿರೂಪಕ ಚಂದನ್ಗೆ ಚಿತ್ರನಟ ರಾಘವೇಂದ್ರ ರಾಜ್ಕುಮಾರ್ ಶ್ರದ್ಧಾಂಜಲಿ ಸಲ್ಲಿದ್ದಾರೆ.
ಬೆಂಗಳೂರಿನ ಕುರುಬರಳ್ಳಿ ಬಳಿಯ ರಾಜಕುಮಾರ್ ಪುತ್ಥಳಿಯ ಪಕ್ಕ ಚಂದನ್ ಪೋಟೋ ಇಟ್ಟು, ಉದಯ ಟಿವಿ ನಿರೂಪಕಿಯರು ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ರಾಘಣ್ಣ, ಚಂದನ್ ಫ್ಯಾಮಿಲಿ ಜೊತೆ ಇಡೀ ಡಾ.ರಾಜ್ ಕುಟುಂಬ ಇರುತ್ತದೆ. ಚಂದನ್ ಕುಟುಂಬಕ್ಕೆ ಈ ದುಖಃ ಭರಿಸುವ ಶಕ್ತಿಯನ್ನ ಆ ದೇವರು ಕೊಡಲಿ. ನಮ್ಮ ರಾಜ್ಕುಮಾರ್ ಟ್ರಸ್ಟ್ ವತಿಯಿಂದ ಮುಂದಿನ ದಿನಗಳಲ್ಲಿ ಚಂದನ್ ಫ್ಯಾಮಿಲಿಗೆ ಸಹಾಯ ಮಾಡುತ್ತೇವೆ ಎಂದರು.
ಚಂದನ್ ಅಪ್ಪಟ್ಟ ಕನ್ನಡ ಅಭಿಮಾನಿಯಾಗಿದ್ದರು. ಅದರಲ್ಲೂ ಡಾ.ರಾಜ್ ಮತ್ತು ರಾಜ್ ಕುಮಾರ್ ಕುಟುಂಬ ಅಂದ್ರೆ ಪಂಚಪ್ರಾಣ. ರಾಜ್ಕುಮಾರ್ ಫ್ಯಾಮಿಲಿಗೆ ಬಲು ಹತ್ತಿರವಾಗಿದ್ರು ಚಂದನ್. ಮುಂದಿನ ದಿನಗಳಲ್ಲಿ ನಿರೂಪಕಿ ಉಷಾ ಮುದಾಳತ್ವದಲ್ಲಿ, ರಾಘಣ್ಣನವರನ್ನ ಚಂದನ್ ಮನೆಗೆ ಕರೆದುಕೊಂಡು ಹೋಗಿ ಸಾತ್ವಾನ ಹೇಳಿಸುವ ಕಾರ್ಯವನ್ನು ಕೈಗೊಳ್ಳಲಾಗುವುದು.
Next Story