ಆರ್.ಆರ್.ನಗರದಲ್ಲಿ ಮತ ಚಲಾಯಿಸಿದ ಸಿನಿಮಾ ತಾರೆಯರು

ಜುಲೈ 12ಕ್ಕೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯನ್ನ ಚುನಾವಣಾ ಆಯೋಗ ಮುಂದೂಡಿತ್ತು. ಚುನಾವಣಾ ಆಯೋಗವೇ ನಿಗದಿಪಡಿಸಿದ್ದ ದಿನಾಂಕದಂತೆ ಇಂದು ಆರ್ ಆರ್ ನಗರದಲ್ಲಿ ಚುನಾವಣೆ ಯಾವುದೇ ಅಹಿತರ ಘಟನೆಗಳು ನಡೆಯದಂತೆ ಶಾಂತವಾಗಿ ನಡೆಯಿತು.
ಶ್ರೀಸಾಮಾನ್ಯರಂತೆ ನಟ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ, ಸುಚೇಂದ್ರ ಪ್ರಸಾದ್ ದಂಪತಿ, ಅವಿನಾಶ್ ದಂಪತಿ ಹಾಗೂ ಅಮೂಲ್ಯ ದಂಪತಿ ಕೂಡ ಮತ ಚಲಾಯಿಸಿದರು. ಜೆಡಿಎಸ್ ಅಭ್ಯರ್ಥಿ ಜಿಹೆಚ್ ರಾಮಚಂದ್ರ, ನಟಿ ಅಮೂಲ್ಯರ ಮಾವ ಆದ್ದರಿಂದ ಅಮೂಲ್ಯಗೆ ಈ ಬಾರಿ ವೋಟ್ ಚಲಾವಣೆ ವಿಭಿನ್ನ ಅನುಭವ ತಂದುಕೊಟ್ಟಿದೆ. ಹಾಗಂತ ಖುದ್ದು ಅಮೂಲ್ಯನೇ TV5 ಜೊತೆ ಹಂಚಿಕೊಂಡಿದ್ದಾರೆ.
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂಬೈನಲ್ಲಿ ಯಜಮಾನ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದು, ವೋಟ್ ಮಿಸ್ ಮಾಡಿಕೊಂಡಿದ್ದಾರೆ. ಚಿತ್ರೀಕರಣಕ್ಕೆ ಡೇಟ್ಸ್ ಕೊಟ್ಟ ನಂತರ ಆರ್ ಆರ್ ನಗರದ ಚುನಾವಣೆ ಮುಂದೂಡಲಾಗಿತ್ತು. ಹಾಗಾಗಿ ಡಿ ಬಾಸ್ಗೆ ಮತದಾನದ ಅವಕಾಶ ಮಿಸ್ ಆಗಿದೆ ಎನ್ನಲಾಗಿದೆ. ಇನ್ನು ನಟ ದಿಗಂತ್ ಕೂಡ ಶೂಟಿಂಗ್ ನಿಮಿತ್ತ ಬೆಂಗಳೂರಿನಿಂದ ಹೊರಗೆ ಹೋಗಿರೋದ್ರಿಂದ, ಅವರೂ ಸಹ ತಮ್ಮ ಹಕ್ಕನ್ನು ಚಲಾಯಿಸುವಲ್ಲಿ ವಿಫಲರಾಗಿದ್ದಾರೆ.