Top

ಪಿಚ್ ಫಿಕ್ಸಿಂಗ್: ಕಾದು ನೋಡುವ ತಂತ್ರ ಅನುಸರಿಸಿದ ಬಿಸಿಸಿಐ

ಪಿಚ್ ಫಿಕ್ಸಿಂಗ್: ಕಾದು ನೋಡುವ ತಂತ್ರ ಅನುಸರಿಸಿದ ಬಿಸಿಸಿಐ
X

ನವದೆಹಲಿ: ಟೀಂ ಇಂಡಿಯಾ ಆಡಿದ್ದ ಮೂರು ಟೆಸ್ಟ್ ಪಂದ್ಯಗಳಲ್ಲಿ ಪಿಚ್ ಫಿಕ್ಸಿಂಗ್ ನಡೆದಿತ್ತು ಎಂದು ಖಾಸಗಿ ವಾಹಿನಿ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಐಸಿಸಿ ತನಿಖೆ ನಡೆಸುತ್ತಿದ್ದು ಮಾಜಿ ಕ್ರಿಕೆಟಿಗ ರಾಬಿನ್ ಮಾರಿಸ್ ತಪಿತಸ್ಥ ಎಂದು ಸಾಬೀತಾದ್ರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬಿಸಿಸಿಐ ಹೇಳಿದ್ದು, ಬಿಸಿಸಿಐ ಕಾದು ನೋಡುವ ತಂತ್ರ ಅನುಸರಿಸಿದೆ.

ಕಳೆದ ಎರಡು ವರ್ಷಗಳಲ್ಲಿ ಟೀಂ ಇಂಡಿಯಾ ಆಡಿರುವ ಮೂರು ಟೆಸ್ಟ್ ಪಂದ್ಯಗಳಲ್ಲಿ ಪಿಚ್ ಫಿಕ್ಸಿಂಗ್ ನಡೆದಿದೆ. ಇದರಲ್ಲಿ ಮಾಜಿ ಮುಂಬೈ ತಂಡದ ಆಟಗಾರ ರಾಬಿನ್ ಮಾರಿಸ್, ಪಾಕಿಸ್ಥಾನ ಮಾಜಿ ಆಟಗಾರ ಹಸನ್ ರಾಜಾ ಭಾಗಿಯಾಗಿದ್ದಾರೆ ಎಂದು ಸ್ಟಿಂಗ್ ಅಪರೇಶನ್‍ನಲ್ಲಿ ಬಹಿರಂಗವಾಗಿದೆ. ಭಾರತ - ಶ್ರೀಲಂಕಾ (ಗಾಲೆ-2017) ಭಾರತ –ಆಸ್ಟ್ರೇಲಿಯಾ (ರಾಂಚಿ,2017), ಭಾರತ- ಇಂಗ್ಲೆಂಡ್ (2016) ಪಂದ್ಯಗಳಲ್ಲಿ ಫಿಚ್ ಪಿಕ್ಸಿಂಗ್ಸ್ ನಡೆದಿತ್ತು ಎಂದು ತಿಳಿದು ಬಂದಿದೆ.

Next Story

RELATED STORIES