Top

ಎನ್​ಟಿಆರ್ ಬಯೋಪಿಕ್​: ತೇಜಾ ಔಟ್, ಕ್ರಿಶ್ ಇನ್

ಎನ್​ಟಿಆರ್ ಬಯೋಪಿಕ್​: ತೇಜಾ ಔಟ್, ಕ್ರಿಶ್ ಇನ್
X

ಎರಡು ತಿಂಗಳ ಹಿಂದೆಯಷ್ಟೆ ಎನ್​ಟಿಆರ್ ಪುತ್ರ ಬಾಲಕೃಷ್ಣ, ತಮ್ಮ ತಂದೆಯ ಜೀವನ ಚರಿತ್ರೆಯನ್ನ ಸಿನಿಮಾ ಮಾಡೋಕೆ ಪ್ರಾರಂಭಿಸಿದರು. ಬಾಲಯ್ಯ ಸ್ವತ: ತಂದೆಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದ ಚಿತ್ರ ಅದ್ದೂರಿ ಕಾರ್ಯಕ್ರಮದಲ್ಲಿ ಸೆಟ್ಟೇರಿತ್ತು. ಮುಹೂರ್ತ ಸಮಾರಂಭದಲ್ಲಿ ಬಾಲಕೃಷ್ಣ ತಂದೆ ಅಭಿನಯದ ದಾನವೀರ ಶೂರಕರ್ಣ ಚಿತ್ರದ ಸೂಪರ್ ಹಿಟ್ ಡೈಲಾಗ್ ಹೇಳಿ ಚಪ್ಪಾಳೆ ಗಿಟ್ಟಿಸಿದ್ದರು. ತೇಜಾ ಚಿತ್ರಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಆದ್ರೆ ಕೆಲ ಭಿನ್ನಾಭಿಪ್ರಾಯಗಳಿಂತ ನಿರ್ದೇಶಕರು ಹೊರಬಂದು ಚಿತ್ರೀಕರಣ ಅರ್ಧಕ್ಕೆ ನಿಂತು ಹೋಗಿತ್ತು.

ಇದೀಗ ತೆಲುಗಿನ ಮತ್ತೊಬ್ಬ ಪ್ರತಿಭಾನ್ವಿತ ನಿರ್ದೇಶಕ ಕ್ರಿಶ್ ಎನ್​ಟಿಆರ್​ ಬಯೋಪಿಕ್ ಚಿತ್ರಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಬಾಲಕೃಷ್ಣ ಅಭಿನಯದ ಗೌತಮಿಪುತ್ರ ಶಾತಕರ್ಣಿ ಚಿತ್ರ ನಿರ್ದೇಶಿಸಿದ್ದ ಕ್ರಿಶ್​ ಇದೀಗ ಎನ್​ಟಿಆರ್​ ಬಯೋಪಿಕ್ ಜವಾಬ್ದಾರಿ ವಹಿಸಿಕೊಂಡಿರೋದು ವಿಶೇಷ. ಒಂದು ವೀಡಿಯೋ ಟೀಸರ್ ರಿಲೀಸ್ ಮಾಡಿ ಈ ವಿಷಯ ಸ್ಪಷ್ಟಪಡಿಸಿದ್ದಾರೆ ನಟಸಿಂಹ ಬಾಲಕೃಷ್ಣ..

ಕೃಷ್ಣಂ ವಂದೇ ಜಗದ್ಗುರು, ವೇದಂ ರೀತಿಯ ಅದ್ಭುತ ಸಿನಿಮಾಗಳನ್ನ ಕಟ್ಟಿಕೊಟ್ಟ ಕ್ರಿಶ್, ಇದೀಗ ಎನ್​ಟಿಆರ್ ಬಯೋಪಿಕ್ ನಿರ್ದೇಶನಕ್ಕೆ ಕೈ ಹಾಕಿರೋದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ..ಕ್ರಿಶ್ ಆಕ್ಷನ್ ಕಟ್​ನಲ್ಲಿ ಮಹಾನ್ ಸಾಧಕ ಎನ್​​ಟಿಆರ್ ಜೀವನಗಾಥೆ ಹೇಗೆ ಮೂಡಿಬರಲಿದೆ ಅಂತ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ..

Next Story

RELATED STORIES