Top

ಐಪಿಎಲ್​ನಲ್ಲಿ ಮತ್ತೊಂದು ದಾಖಲೆ ಬರೆದ ಧೋನಿ!

ಐಪಿಎಲ್​ನಲ್ಲಿ ಮತ್ತೊಂದು ದಾಖಲೆ ಬರೆದ ಧೋನಿ!
X

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮೂರನೇ ಬಾರಿ ಪ್ರಶಸ್ತಿ ತಂದುಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್​ನಲ್ಲಿ ಅತೀ ಹೆಚ್ಚು ಸ್ಟಂಪಿಂಗ್ ಮಾಡಿದ ಮತ್ತೊಂದು ದಾಖಲೆ ಬರೆದಿದ್ದಾರೆ.

ಭಾನುವಾರ ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಎದುರಾಳಿ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಸ್ಟಂಪ್ ಮಾಡುವ ಮೂಲಕ ಧೋನಿ 33 ಬಾರಿ ಸ್ಟಂಪ್ ಮಾಡಿದರು. ಇದರೊಂದಿಗೆ ಐಪಿಎಲ್​ನಲ್ಲಿ ಅತೀ ಹೆಚ್ಚು ಸ್ಠಂಪ್ ಮಾಡಿದ ಕೋಲ್ಕತಾ ನೈಟ್​ ರೈಡರ್ಸ್ ತಂಡದ ಕೀಪರ್ ರಾಬಿನ್ ಉತ್ತಪ್ಪ ಅವರ 32 ವಿಕೆಟ್ ದಾಖಲೆ ಹಿಂದಿಕ್ಕಿದರು.

ಧೋನಿ 172 ಪಂದ್ಯಗಳಲ್ಲಿ 33 ವಿಕೆಟ್ ಸಾಧನೆ ಮಾಡಿದರೆ ರಾಬಿನ್ ಉತ್ತಪ್ಪ 165 ಪಂದ್ಯಗಳಲ್ಲಿ 32 ವಿಕೆಟ್ ಪಡೆದಿದ್ದರು. ದಿನೇಶ್ ಕಾರ್ತಿಕ್ 168 ಪಂದ್ಯಗಳಲ್ಲಿ 30, ವೃದ್ಧಿಮಾನ್ ಸಾಹ 115 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ.

ಧೋನಿ 33 ಸ್ಟಂಪ್ ಹಾಗೂ 83 ಕ್ಯಾಚ್ ಸೇರಿದಂತೆ 116 ಬಲಿ ಪಡೆದಿದ್ದಾರೆ. ಅಲ್ಲದೇ 40.16ರ ಸರಾಸರಿಯಲ್ಲಿ 4016 ರನ್ ಗಳಿಸಿದ್ದಾರೆ.

Next Story

RELATED STORIES