ಸದ್ಯಕ್ಕೆ ನಿವೃತ್ತಿಯಾಗಲ್ಲ: ಹರ್ಭಜನ್

X
TV5 Kannada28 May 2018 3:10 PM GMT
ಮುಂಬೈ: ಟೀಂ ಇಂಡಿಯಾದ ಅನುಭವಿ ಆಟಗಾರ ಹರ್ಭಜನ್ ಸಿಂಗ್ ಈಗಲೇ ಕ್ರಿಕೆಟ್ನಿಂದ ನಿವೃತ್ತಿ ಹೊಂದುವುದಿಲ್ಲ ಎಂದು ತಿಳಿಸಿದ್ದಾರೆ.
ಭಾನುವಾರ ಸನ್ರೈಸರ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಬಾರಿಯ ಐಪಿಎಲ್ನಲ್ಲಿ ಚೆನ್ನೈ ತಂಡದ ಪರ ಆಡಿದ್ದಾರೆ. ಈ ಗೆಲುವಿನೊಂದಿಗೆ ನಾಲ್ಕು ಐಪಿಎಲ್ ಟ್ರೋಫಿ ಗೆದ್ದ ಮೂರನೇ ಆಟಗಾರ ಎನಿಸಿದರು.
ಫೈನಲ್ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಭಜ್ಜಿ ಕಾಣಿಸಿಕೊಂಡಿರಲಿಲ್ಲ. ಹರ್ಭಜನ್ಗೆ ಅವಕಾಶ ಕಡಿಮೆಯಾಗುತ್ತಿವೆ. ಇನ್ನು ನಿವೃತ್ತಿ ಒಂದೇ ದಾರಿ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಹರ್ಭಜನ್ ಸಿಂಗ್, ನಾನು ಸದ್ಯಕ್ಕೆ ನಿವೃತ್ತಿ ಹೊಂದುವುದಿಲ್ಲ. ನನ್ನ ಆಟವನ್ನ ನನ್ನ ಅಭಿಮಾನಿಗಳಿಗಾಗಿ ಮುಂದುವರೆಸುತ್ತೇನೆ. ಇದು ಗಂಭೀರ್ ಮತ್ತು ಹರ್ಭಜನ್ಗೂ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.
Next Story