Top

ಕಂಡ ಕಂಡವರ ಮೇಲೆ ಹಲ್ಲೆ ನಡೆಸಿದ ರೌಡಿ ಗ್ಯಾಂಗ್

ಕಂಡ ಕಂಡವರ ಮೇಲೆ ಹಲ್ಲೆ ನಡೆಸಿದ ರೌಡಿ ಗ್ಯಾಂಗ್
X

ಬೆಂಗಳೂರು: ಮಕ್ಕಳ ಕಳ್ಳರ ವದಂತಿ ಹಲ್ಲೆ ನಗರದ ಜನರ ನಿದ್ದೆಗೆಡಿಸಿತ್ತು. ಇದೀಗ ಬೆಂಗಳೂರಿನಲ್ಲಿ ಪುಡಿರೌಡಿಗಳು ಅಟ್ಟಹಾಸ ಮೆರೆದು ಜನರ ನೆಮ್ಮದಿಗೆಡಿಸಲು ಮುಂದಾಗಿದ್ದಾರೆ.. ಮಚ್ಚು ಲಾಂಗು ಹಿಡಿದು ರಸ್ತೆಯಲ್ಲಿ ರೌಡಿ ಗ್ಯಾಂಗ್ ಕಂಡ ಕಂಡವರ ಮೇಲೆ ಹಲ್ಲೆ ನಡೆಸಿ ರಾತ್ರಿಯಲ್ಲಿ ರಕ್ತ ಹರಿಸಿದ್ದಾರೆ..ಮೂರು ದಿನಗಳಿಂದ ಎರಡು ರೌಡಿ ಗ್ಯಾಂಗ್ ಗಳ ನಡುವೆ ನಡೆಯುತ್ತಿದ್ದ ಗ್ಯಾಂಗ್ ವಾರ್ ಜನರ ಮೇಲೆ ಹಲ್ಲೆಗೆ ಕಾರಣ ಎನ್ನಲಾಗಿದೆ..ವಸೀಂ , ಬಿಲಾಲ್ , ಮೋಸಿನ್ ಒಂದು ಗ್ಯಾಂಗ್ .. ತೌಫಿಕ್ ಅಲಿಯಾಸ್ ಚಪ್ಡಿ ಮತ್ತು ಇತರ ಮೂವರು ಒಂದು ಗ್ಯಾಂಗ್..ಕಳೆದ ಮೂರು ದಿನಗಳಿಂದ ಕೆ ಜಿ ಹಳ್ಳಿ ಪೊಲೀಸ್ ಠಾಣೆ ಲಿಮಿಟ್ಸ್ ಗೋವಿಂದಪುರ ಬಳಿ ರಸ್ತೆಯಲ್ಲೆ ಲಾಂಗು ಮಚ್ಚುಗಳಿಂದ ಜನರ ಮೇಲೆ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾರೆ..ನಿನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಮಚ್ಚುಲಾಂಗ್ ಹಿಡಿದು ರೋಡಿಗಿಳಿದಿದ್ದ ಪುಡಿ ಡಾನ್ ಗಳು ರಸ್ತೆಯಲ್ಲಿ ಕಂಡ ಕಂಡವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.. ಮೂಜೀಬ್ ,ಬುರ್ಹಾನ್ ,ಅಯಾಜ್ ಮತ್ತು ಬಶೀರ್ ಸೇರಿದಂತೆ ಆರು ಜನರಿಗೆ ಗಂಭೀರ ಗಾಯಗಳಾಗಿ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..ಇಷ್ಟೆಲ್ಲಾ ರಾದ್ದಾಂತ ನಡೆದರು ಕೆ.ಜಿ.ಹಳ್ಳಿ ಪೊಲೀಸರು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬ ಗಂಭೀರ ಆರೋಪ ಸ್ಥಳೀಯರದ್ದು.. ಕೂಡಲೇ ಎರಡು ರೌಡಿ ಗ್ಯಾಂಗುಗಳ ಆರೋಪಿಗಳನ್ನ ಬಂಧಿಸಬೇಕು..ಅಮಾಯಕ ಜನರಿಗೆ ಪೊಲೀಸರು ಹೆಚ್ಚಿನ ಭದ್ರತೆ ನೀಡಬೇಕೆಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಗಾಯಾಳುಗಳ ಪೋಷಕರು ಮನವಿ ಮಾಡಿದ್ದಾರೆ.

Next Story

RELATED STORIES