Top

ಹೆಚ್ಡಿಕೆ ಮಾತು ತಪ್ಪಿದ್ದಾರೆ: ಪ್ರತಾಪ್ ಸಿಂಹ

ಹೆಚ್ಡಿಕೆ ಮಾತು ತಪ್ಪಿದ್ದಾರೆ: ಪ್ರತಾಪ್ ಸಿಂಹ
X

ಮೈಸೂರು: ರೈತರ ಸಾಲಮನ್ನಾಗೆ ಆಗ್ರಹಿಸಿ, ಬಿಜೆಪಿ ರಾಜ್ಯ ಬಂದ್ ಗೆ ಕರೆ ನೀಡಿದ್ದು, ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕುಮಾರಸ್ವಾಮಿ ಕಾಂಗ್ರೆಸ್ ಜೊತೆ ಸೇರಿ ಮಾತು ತಪ್ಪಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಸಾಲಮನ್ನಾ ಮಾಡ್ತೀನಿ ಅಂದಿದ್ರು. 5 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರವನ್ನ ಬೈಯುತ್ತಲೇ ಬಂದಿದ್ರು. ಆದ್ರೆ ಇದೀಗಾ ಅವರ ಜೊತೆಯೇ ಸೇರಿ ಅಧಿಕಾರ ಮಾಡ್ತಿದ್ದಾರೆ.ಅವರು ಸಾಲ ಮನ್ನಾ ಮಾಡೋವರೆಗೂ ನಮ್ಮ ಹೋರಾಟ ನಿರಂತರ ಎಂದು ಹೇಳಿದ್ದಾರೆ.ರಾಜ್ಯದಲ್ಲಿ ಮೂರುವರೆ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆದ್ರೆ ಕುಮಾರಸ್ವಾಮಿ ಅವ್ರು ಸಿಎಂ ಆಗಿ ಮೂರು ದಿನ ಕಳೆದಿದೆ. ಆದರೂ ಈ ವರೆಗೂ ಸಾಲಮನ್ನಾ ಬಗ್ಗೆ ಕ್ರಮ ಕೈಗೊಂಡಿಲ್ಲ. ಇದೀಗಾ ನಾವು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿಲ್ಲ ಅಂತಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡುತ್ತಲೇ ಇರುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Next Story

RELATED STORIES