Top

ಅರ್ಜುನ್ ರಾಂಪಾಲ್​- ಮೆಹೆರ್ 20 ವರ್ಷಗಳ ದಾಂಪತ್ಯಕ್ಕೆ ತೆರೆ

ಅರ್ಜುನ್ ರಾಂಪಾಲ್​- ಮೆಹೆರ್ 20 ವರ್ಷಗಳ ದಾಂಪತ್ಯಕ್ಕೆ ತೆರೆ
X

ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಮತ್ತು ಮೆಹೆರ್ ಜೆಸಿಯಾ ವಿಚ್ಛೇದನ ಪಡೆದು ದೂರವಾಗಲು ಪರಸ್ಪರ ಒಪ್ಪಿಗೆ ಮಾಡಿಕೊಂಡಿದ್ದಾರೆ. ಈ ಮೂಲಕ ಇವರಿಬ್ಬರ 20 ವರ್ಷಗಳ ದಾಂಪತ್ಯ ಕೊನೆಗೊಂಡಂತಾಗಿದೆ.

ಜಂಟಿ ಪತ್ರಿಕಾ ಪ್ರಕಟಣೆ ನೀಡಿರುವ ಅರ್ಜುನ್ ರಾಂಪಾಲ್ ಮತ್ತು ಮೆಹೆರ್, 20 ವರ್ಷಗಳ ಸುದೀರ್ಘ ದಾಂಪತ್ಯದಿಂದ ಒಳ್ಳೆಯ ಹಾಗೂ ಸುಂದರ ನೆನಪುಗಳು ನಮ್ಮೊಂದಿಗೆ ಇದೆ. ಇಬ್ಬರು ಭಿನ್ನ ದಾರಿಯಲ್ಲಿ ನಡೆಯಲು ನಿರ್ಧರಿಸಿದ್ದೇವೆ. ಈ ಮೂಲಕ ಹೊಸ ಜಿವನ ನಡೆಸಲಿದ್ದೇವೆ ಎಂದಿದ್ದಾರೆ.

45 ವರ್ಷದ ಅರ್ಜುನ್ 47 ವರ್ಷದ ಮೆಹೆರ್ 1998ರಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ್ದರು. ಮೆಹೆರ್ ರೂಪದರ್ಶಿಯಾಗಿದ್ದಾರೆ. ಇಬ್ಬರಿಗೂ 16 ವರ್ಷದ ಮೆಹೆಕಾ ಮತ್ತು 13 ವರ್ಷದ ಮೈರಾ ಇಬ್ಬರು ಪುತ್ರಿಯರು ಇದ್ದಾರೆ. ಇಬ್ಬರ ನಡುವೆ ಬಿರುಕು ಉಂಟಾಗಿದ್ದು, ವಿಚ್ಛೇದನ ಕುರಿತು ಹಲವಾರು ಸಮಯದಿಂದ ವದಂತಿಗಳು ಕೇಳಿ ಬರುತ್ತಿತ್ತು.

Next Story

RELATED STORIES