Top

ಗುಜರಾತ್​ನಲ್ಲಿ ಗಮನ ಸೆಳೆಯುತ್ತಿರುವ ಮಹಿಳಾ ಕೂಲಿ!

ಗುಜರಾತ್​ನಲ್ಲಿ ಗಮನ ಸೆಳೆಯುತ್ತಿರುವ ಮಹಿಳಾ ಕೂಲಿ!
X

ಕೂಲಿಯಾಳುಗಳು ಅಂದರೆ ಅದು ಪುರಷರಷ್ಟೇ ಕಣ್ಮುಂದೆ ಬರುತ್ತಿದ್ದರು. ಆದರೆ ಇನ್ನು ಮುಂದೆ ಮಹಿಳೆಯರೂ ಈ ಕ್ಷೇತ್ರಕ್ಕೆ ಕಾಲಿಟ್ಟು ತಾವು ಯಾವುದಕ್ಕೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಡಲಿದ್ದಾರೆ. ಈ ನಿಟ್ಟಿನಲ್ಲಿ ಗುಜರಾತ್​ನಲ್ಲಿ ಮಹಿಳೆಯೊಬ್ಬರು ಮೊದಲ ಹೆಜ್ಜೆ ಇಟ್ಟಿದ್ದಾರೆ.

ಮಂಜು ದೇವಿ ಎಂಬ ಮಹಿಳೆ ಗುಜರಾತ್​ನ ಬಂದರು ಸಮೀಪ ಇರುವ ಜೈಪುರ ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ಧಾರೆ. 10 ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಿರುವ ಈಕೆ ಮೂರು ಮಕ್ಕಳನ್ನು ಸಾಕಲು ಈ ವೃತ್ತಿಗೆ ಇಳಿದಿದ್ದಾರೆ.

ಪುರುಷ ಪ್ರಧಾನ ವೃತ್ತಿಯಾದ ಇಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ ನಂತರ ಪತಿ ಮಹದೇವ್ ಅವರ ಕೂಲಿ ಸಂಖ್ಯೆ 15ನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ದೈಹಿಕ ಶ್ರಮ ಹೆಚ್ಚು ಬಯಸುವ ಈ ವೃತ್ತಿಯಲ್ಲಿ ಮಂಜು ದೇವಿ ಈಗ ಸೈ ಎನಿಸಿಕೊಂಡಿದ್ದಾರೆ.

ಕುಟುಂಬದ ವಿರೋಧದ ನಡುವೆಯೂ ಕೂಲಿ ವೃತ್ತಿ ನಡೆಸುತ್ತಿರುವ ಮಂಜು ದೇವಿ, ಕೆಂಪು ಕುರ್ತಾ ಮತ್ತು ಬಿಳಿ ಸಲ್ವಾರ್ ಸಮವಸ್ತ್ರವನ್ನು ತಾವೇ ಸಿದ್ಧಪಡಿಸಿಕೊಂಡಿದ್ದಾರೆ. ಎಲ್ಲರಿಗೂ ನೀಡಿದಂತೆ ವಿವಿಧ ಪಾಳಿಯಲ್ಲಿ ಕೂಡ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಮಹಿಳಾ ಸಾಧಕಿಯರಿಗೆ ನೀಡಲಾದ ಸನ್ಮಾನದಲ್ಲಿ ಮಂಜು ದೇವಿ ಕೂಡ ಒಬ್ಬರು.

Next Story

RELATED STORIES