Top

3ನೇ ಬಾರಿಗೆ ಚೆನ್ನೈ ಮುಡಿಗೆ ಐಪಿಎಲ್ ಕಿರೀಟ: ವ್ಯಾಟ್ಸನ್ ಶತಕ

3ನೇ ಬಾರಿಗೆ ಚೆನ್ನೈ ಮುಡಿಗೆ ಐಪಿಎಲ್ ಕಿರೀಟ: ವ್ಯಾಟ್ಸನ್ ಶತಕ
X

ಆಲ್ ರೌಂಡರ್ ಶೇನ್ ವ್ಯಾಟ್ಸನ್ ಸಿಡಿಸಿದ ಅಜೇಯ ಶತಕದ ನೆರವಿನಿಂದ 8 ವಿಕೆಟ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಬಗ್ಗುಬಡಿದ ಚೆನ್ನೈ ಸೂಪರ್ ಕಿಂಗ್ಸ್ 3ನೇ ಬಾರಿಗೆ ಐಪಿಎಲ್ ಟಿ-20 ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 178 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಚೆನ್ನೈ 1.3 ಓವರ್ ಬಾಕಿ ಇರುವಂತೆಯೇ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಇದು ಚೆನ್ನೈ ಪಾಲಿಗೆ ಮೂರನೇ ಪ್ರಶಸ್ತಿಯಾದರೆ, ಹೈದರಾಬಾದ್ ತಂಡ ಮತ್ತೊಮ್ಮೆ ಪ್ರಶಸ್ತಿ ಎತ್ತಿ ಹಿಡಿಯುವ ಕನಸು ನುಚ್ಚುನೂರಾಯಿತು.

ಚೆನ್ನೈ ತಂಡದ ಪರ ವ್ಯಾಟ್ಸನ್ 57 ಎಸೆತಗಳಲ್ಲಿ 11 ಬೌಂಡರಿ ಹಾಗೂ 9 ಸಿಕ್ಸರ್ ನೆರವಿನಿಂದ 117 ರನ್ ಬಾರಿಸಿ ಅಜೇಯರಾಗಿ ಉಳಿಯುವ ಮೂಲಕ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಪ್ರಸಕ್ತ ಋತುವಿನಲ್ಲಿ 2 ಶತಕ ಸಿಡಿಸಿದ ಏಕೈಕ ಬ್ಯಾಟ್ಸ್ ಮನ್ ಎಂಬ ಗೌರವಕ್ಕೆ ವ್ಯಾಟ್ಸನ್ ಪಾತ್ರರಾದರು.

  • ಸಂಕ್ಷಿಪ್ತ ಸ್ಕೋರ್
  • ಸನ್ ರೈಸರ್ಸ್ ಹೈದರಾಬಾದ್ 20 ಓವರ್ 6 ವಿಕೆಟ್್ 178 (ವಿಲಿಯಮ್ಸನ್ 47, ಯೂಸುಫ್ ಅಜೇಯ 45, ಧವನ್ 23, ಶಕೀಬ್ 23, ಬ್ರಾಥ್ ವೇಟ್ ಅಜೇಯ 21, ಜಡೇಜಾ 24/1).
  • ಚೆನ್ನೈ ಸೂಪರ್ ಕಿಂಗ್ಸ್ 18.3 ಓವರ್ 2 ವಿಕೆಟ್ 181 (ವ್ಯಾಟ್ಸನ್ ಅಜೇಯ 117, ರೈನಾ 32, ರಾಯುಡು ಅಜೇಯ 17)

Next Story

RELATED STORIES