Top

ಎಕ್ಸ್​ಪ್ರೆಸ್​ ವೇ ಮೋದಿ ಉದ್ಘಾಟನೆ: ದೆಹಲಿ ವಾಯುಮಾಲಿನ್ಯಕ್ಕೆ ಪರಿಹಾರ ಸಿಕ್ಕಿತೇ?

ಎಕ್ಸ್​ಪ್ರೆಸ್​ ವೇ ಮೋದಿ ಉದ್ಘಾಟನೆ: ದೆಹಲಿ ವಾಯುಮಾಲಿನ್ಯಕ್ಕೆ ಪರಿಹಾರ ಸಿಕ್ಕಿತೇ?
X

ದೆಹಲಿ ಮತ್ತು ಮೀರತ್ ನಡುವೆ ಸುಮಾರು ಎರಡೂವರೆ ಗಂಟೆ ಪ್ರಯಾಣದ ಅವಧಿಯನ್ನು 40 ನಿಮಿಷಗಳಿಗೆ ಕಡಿತಗೊಳಿಸುವ ದೆಹಲಿ ಮತ್ತು ಮೀರತ್ ನಡುವಿನ 14 ಪಥಗಳ ಎಕ್ಸ್​ಪ್ರೆಸ್ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು.

ಸುಮಾರು 7500 ಕೋಟಿ ರೂ. ವೆಚ್ಚದ ಈ ಹೆದ್ದಾರಿ ಕಾಮಗಾರಿಯನ್ನು ಮೋದಿ ಉತ್ತರ ಪ್ರದೇಶದ ಭಾಗ್​ಪಥ್​ನಲ್ಲಿ ಲೋಕಾರ್ಪಣೆ ಮಾಡಿದರು. ಇದೇ ವೇಳೆ ಜಮ್ಮು-ಕಾಶ್ಮೀರದಿಂದ ದೆಹಲಿ ನಡುವೆ ಸುಮಾರು 50 ಸಾವಿರ ವಾಹನಗಳು ಏಕಕಾಲದಲ್ಲಿ ಸಂಚರಿಸಬಹುದಾದ 11 ಸಾವಿರ ಕೋಟಿ ರೂ. ಮೊತ್ತದ ಎಕ್ಸ್​ಪ್ರೆಸ್ ಹೈವೆಯನ್ನು ಉದ್ಘಾಟಿಸಿದರು. ಇದು ದೇಶದ ಮೊದಲ ಸ್ಮಾರ್ಟ್​ ಮತ್ತು ಪರಿಸರ ಸ್ನೇಹಿ ರಸ್ತೆಯಾಗಿದೆ.

ನಂತರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ದೇಶದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ನಮ್ಮ ಸರಕಾರ ಒತ್ತು ನೀಡಿದ್ದು, ರೈಲ್ವೆ, ಹೆದ್ದಾರಿ ಹಾಗೂ ವೈಮಾನಿಕ ಯಾನಗಳ ಬಗ್ಗೆ ಹೆಚ್ಚು ಗಮನ ಹರಿಸಿದೆ. ಇದರಿಂದ ಹವಾನಿಯಂತ್ರಿತ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರು ಈಗ ವಿಮಾನ ಪ್ರಯಾಣಕ್ಕೆ ಮೊರೆ ಹೋಗುತ್ತಿದ್ದಾರೆ ಎಂದರು.

Next Story

RELATED STORIES