ಲಾರ್ಡ್ಸ್ ಟೆಸ್ಟ್: ಇಂಗ್ಲೆಂಡ್ ಮಣಿಸಿದ ಪಾಕಿಸ್ತಾನ

X
TV5 Kannada27 May 2018 2:02 PM GMT
ಸಂಘಟಿತ ಪ್ರದರ್ಶನ ನೀಡಿದ ಪಾಕಿಸ್ತಾನ ಲಾರ್ಡ್ಸ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು 9 ವಿಕೆಟ್ಗಳಿಂದ ಸೋಲಿಸಿದೆ.
ಪಂದ್ಯದ ನಾಲ್ಕನೇ ದಿನವಾದ ಭಾನುವಾರ 6 ವಿಕೆಟ್ಗೆ 235 ರನ್ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ 242 ರನ್ಗಳಿಗೆ ಆಲೌಟಾಯಿತು. 64 ರನ್ಗಳ ಸುಲಭ ಗುರಿ ಪಡೆದ ಪಾಕಿಸ್ತಾನ ಒಂದು ದಿನದ ಆಟ ಬಾಕಿ ಇರುವಂತೆಯೇ 1 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಇದರೊಂದಿಗೆ ಇಂಗ್ಲೆಂಡ್ ಕಳೆದ 10 ಟೆಸ್ಟ್ಗಳಲ್ಲಿ ಅನುಭವಿಸಿದ 7ನೇ ಸೋಲಾಗಿದೆ.
- ಸಂಕ್ಷಿಪ್ತ ಸ್ಕೋರ್
- ಇಂಗ್ಲೆಂಡ್ 184 ಮತ್ತು 242
- ಪಾಕಿಸ್ತಾನ 363 ಮತ್ತು 1 ವಿಕೆಟ್ಗೆ 66
Next Story