Top

ಎಲ್ಲಾ ಬೈಕ್ ಒಟ್ಟಿಗೆ ಓಡಿಸಲಾರೆ: ಧೋನಿ ಹಾಗೆಂದಿದ್ದು ಯಾಕೆ ಗೊತ್ತಾ?

ಎಲ್ಲಾ ಬೈಕ್ ಒಟ್ಟಿಗೆ ಓಡಿಸಲಾರೆ: ಧೋನಿ ಹಾಗೆಂದಿದ್ದು ಯಾಕೆ ಗೊತ್ತಾ?
X

ತಂಡದ ಆಟಗಾರರ ವಯಸ್ಸು ಕೂಡ ಮುಖ್ಯ. ಅಂತಿಮ 11 ಆಯ್ಕೆ ಮಾಡುವಾಗ ಹೆಚ್ಚು ಫಿಟ್ ಆಗಿರುವವರೂ ಕೂಡ ಮುಖ್ಯ. ಕೆಲವೊಮ್ಮೆ ಹಿರಿಯ ಆಟಗಾರರನ್ನು ಕೂಡ ಅನಿವಾರ್ಯವಾಗಿ ಕೈಬಿಡಬೇಕಾಗುತ್ತದೆ. ಯಾಕೆಂದರೆ ನಾನು ಒಂದೇ ಬಾರಿಗೆ ನನ್ನಲ್ಲಿರುವ ಎಲ್ಲಾ ಬೈಕ್​ಗಳನ್ನು ಒಟ್ಟಿಗೆ ಓಡಿಸಲು ಆಗುವುದಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಫೈನಲ್ ತಲುಪಿದ್ದು, ಭಾನುವಾರ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಹಿನ್ನೆಲೆಯಲ್ಲಿ ಟೂರ್ನಿಯಲ್ಲಿ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಅವರನನ್ಉ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳದೇ ಇರುವ ಬಗ್ಗೆ ಅವರು ಪ್ರತಿಕ್ರಿಯಿಸಿದರು.

ನನ್ನ ಬಳಿ ಸಾಕಷ್ಟು ಕಾರು ಹಾಗೂ ಬೈಕ್​ಗಳಿವೆ. ಒಂದೇ ಬಾರಿಗೆ ಎಲ್ಲವನ್ನೂ ಓಡಿಸಲು ಆಗುವುದಿಲ್ಲ. ತಂಡದಲ್ಲಿ 7ರಿಂದ 8 ಬೌಲರ್​ಗಳು ಇದ್ದಾಗ ನಾವು ಯಾರ ವಿರುದ್ಧ ಆಡುತ್ತಿದ್ದೇವೆ. ಬ್ಯಾಟ್ಸ್​ಮನ್ ಯಾರು? ಪರಿಸ್ತಿತಿ ಏನು ಎಂಬುದನ್ನೆಲ್ಲಾ ಗಮನಿಸಬೇಕಾಗುತ್ತದೆ. ಇದರ ಆಧಾರದ ಮೇಲೆ ಶ್ರೇಷ್ಠ ತಂಡವನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದು ಧೋನಿ ವಿವರಿಸಿದರು.

Next Story

RELATED STORIES