Top

ಸಾಲಮನ್ನಾ ಮಾಡಿಲ್ಲ ಅಂದ್ರೆ ರಾಜೀನಾಮೆ- ಹೆಚ್ಡಿಕೆ

ಸಾಲಮನ್ನಾ ಮಾಡಿಲ್ಲ ಅಂದ್ರೆ ರಾಜೀನಾಮೆ- ಹೆಚ್ಡಿಕೆ
X

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಂಪತಿ ಶುಭಕೋರಿದ್ದಾರೆ. ಹೆಚ್ಡಿಕೆ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಶಿವರಾಜ್ ಕುಮಾರ್, ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ವಿಷ್ ಮಾಡೋಕೆ ಬಂದಿದ್ದೆ. ವಿಷ್ ಮಾಡಿದೆ. ನಾವು ಯಾವಾಗಲೂ ಕುಮಾರಸ್ವಾಮಿಯವರ ಜೊತೆ ಸಂಪರ್ಕದಲ್ಲಿರುತ್ತೇವೆ. ಕುಮಾರಸ್ವಾಮಿಯವರು ಅಂದರೆ ನಮಗೆ ಫ್ಯಾಮಿಲಿ. ಕೇವಲ ಪೊಲಿಟಿಕಲ್ ಆಗಿ ಬರಬೇಕು ಅಂತೇನಿಲ್ಲ. ಕುಮಾರಸ್ವಾಮಿಯವರಿಗೆ ಆಲ್ ದಿ ಬೆಸ್ಟ್. ಇಡೀ ಜನತೆಗೆ ಒಳ್ಳೆದಾಗಲಿ ಎಂದು ಹೇಳಿದರು. ಇನ್ನು ಪತ್ನಿ ಗೀತಾ ಶಿವರಾಜ್ ಕುಮಾರ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವಿಚಾರದ ಬಗ್ಗೆ ಮಾತನಾಡಿದ ನಟ, ಈಗ ಏನಿಲ್ಲ.ನಮ್ಮ ಫಿಲ್ಮ್ ಪ್ರೊಡಕ್ಷನ್ ಗೆ ಸಂಬಂಧಿಸಿದ ಜವಾಬ್ದಾರಿ ಗೀತಾರ ಮೇಲಿದೆ. ಆದರೆ ಗೀತಾ ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಪರ ಪ್ರಚಾರ ಮಾಡಿದ್ರು. ಹೀಗಾಗಿ ಕುಮಾರಸ್ವಾಮಿಯವರು ಸಿಎಂ ಆಗಿದ್ದಕ್ಕೆ ಇಬ್ಬರೂ ವಿಷ್ ಮಾಡಿದ್ದೇವೆ ಅಷ್ಟೆ ಎಂದಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಶಿವರಾಜ್ ಕುಮಾರ್ ಭೇಟಿ ಸೌಜನ್ಯದ ಭೇಟಿ. ಸಿಎಂ ಆಗಿದ್ದಕ್ಕೆ ಬಂದು ಶಿವರಾಜ್ ಕುಮಾರ್ ವಿಷ್ ಮಾಡಿದ್ರು ಎಂದಿದ್ದಾರೆ.

ತಂದನಂತರ ಮಾತನಾಡಿದ ಅವರು, ನಾಳೆ ಪ್ರಧಾನಿ ಮೋದಿಯವರನ್ನು ಭೇಟಿಯಾಗಲಿದ್ದೇನೆ. ಪ್ರಧಾನಿ ಜೊತೆ ಸೌಜನ್ಯದ ಭೇಟಿ ಅಷ್ಟೆ. ನಮಗೆ ಕೇಂದ್ರ ಸರಕಾರದಿಂದ ಸಹಕಾರ ಕೊಡಲು ಮನವಿ ಮಾಡ್ತೀನಿ. ರಾಜ್ಯ ಹಾಗೂ ಕೇಂದ್ರ ಸರಕಾರ ಸಾಮರಸ್ಯವಾಗಿ ಪರಸ್ಪರ ವಿಶ್ವಾಸದಿಂದ ನಡೆದುಕೊಳ್ಳಬೇಕಿದೆ ಎಂದರು. ಇನ್ನು ರಾಹುಲ್ ಗಾಂಧಿಯವರಿಂದ ನನಗೆ ಯಾವುದೇ ಬುಲಾವ್ ಬಂದಿಲ್ಲ. ಯಾರೂ ಅಪಾರ್ಥ ಮಾಡ್ಕೊಬಾರದು. ರಾಹುಲ್ ಗಾಂಧಿಯವರು ಕರೆದರು, ಕುಮಾರಸ್ವಾಮಿ ಹೋಗಲಿಲ್ಲ ಅಂತ ಮತ್ತೆ ಅದಕ್ಕೊಂದು ರಾಜಕೀಯ ಬಣ್ಣ ಕಟ್ಟಿಬಿಡ್ತಾರೆ. ರಾಹುಲ್ ಗಾಂಧಿಯವರಿಗೆ ಹಾಗೂ ಸೋನಿಯಾಗಾಂಧಿಯವರ ಜೊತೆ ನಿನ್ನೆ ದೂರವಾಣಿ ಕರೆ ಮಾಡಿ ಮಾತಾಡಿದ್ದೇನೆ. ರಾಹುಲ್ ಗಾಂಧಿ ವಿದೇಶಕ್ಕೆ ಪ್ರಯಾಣ ಮಾಡಲಿದ್ದಾರೆ ಎಂದು ಗೊತ್ತಾಯ್ತು . ನಿನ್ನೆ ಕರೆ ಮಾಡಿ ವಿಷ್ ಮಾಡಿದ್ದೇನೆ ರಾಜಕೀಯ ಬೆಳವಣಿಗೆ ಬಗ್ಗೆ ಏನೂ ಚರ್ಚೆ ಆಗಿಲ್ಲ ಎಂದಿದ್ದಾರೆ.

ಅಲ್ಲದೇ ಬಹುಮತ ಇಲ್ಲದೇ ಹೋದರು ಸಾಲಮನ್ನಾ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದಿರುವ ಹೆಚ್ಡಿಕೆ, ನಿನ್ನೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದನ್ನ ಗಮನಿಸಿದ್ದೇನೆ. ದಯವಿಟ್ಟು ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ರೈತರಲ್ಲಿ ಹೆಚ್ಡಿಕೆ ಮನವಿ ಮಾಡಿಕೊಂಡಿದ್ದಾರೆ.ಅಲ್ಲದೇ ಚುನಾವಣೆ ಸಂದರ್ಭದಲ್ಲಿ ರೈತಸಂಘಟನೆಯವರು ಯಾರ್ಯಾರು ಏನೇನು ಮಾಡಿದ್ದಾರೆ ಅಂತ ನನಗೆ ಗೊತ್ತು. ನಾನು ಕುರ್ಚಿಗೆ ಅಂಟಿಕೊಂಡು ಕೂರುವವನಲ್ಲ. ಯಡಿಯೂರಪ್ಪ ರೈತ ಆತ್ಮಹತ್ಯೆ ಪ್ರಚೊದನೆ ಮಾಡೋದು ಬೇಡ. ಸಣ್ಣ ಮಾನವೀಯತೆ ಬೇಡವಾ, ನಮ್ಮ ಮಾತಿನಿಂದ ರೈತ ಕುಟುಂಬಗಳು ಕಂಗಾಲಾಗಿ ರೈತರ ಮಕ್ಕಳು ಅನಾಥರಾದರೆ ಯಾರುಗತಿ..?ನಿಮ್ಮಲ್ಲಿ ನಾನು ಒಬ್ಬ. ರೈತರು ಕಂಗಾಲಾಗುವ ಅವಶ್ಯಕತೆ ಇಲ್ಲ. ಒಂದು ವಾರ ಸಮಯ ಕೊಡಿ, ಇನ್ನು ಸಚಿವ ಸಂಪುಟ ವಿಸ್ತರಣೆ ಆಗಿಲ್ಲ ಎಂದು ಹೇಳಿದ್ದಾರೆ.

ಇನ್ನು ರೈತರ ಸಾಲಮನ್ನಾ ವಿಚಾರವಾಗಿ ಕರ್ನಾಟಕ ಬಂದ್ ಗೆ ಕರೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೆಚ್ಡಿಕೆ, ಯಾಕೆ ಬಂದ್ ಗೆ ಕರೆ ನೀಡಿದ್ದಾರೆ ಎಂಬ ವಿಚಾರ ರಾಜ್ಯದ ಜನತೆಗೆ ಗೊತ್ತು. ಬಂದ್ ಮಾಡಿದರೆ ಜನರಿಗೇ ನಷ್ಟ.ನಿಮಗೇ ನಷ್ಟ. ಹೀಗಾಗಿ ಬಂದ್ ಗೆ ಸಹಕಾರ ನೀಡಬೇಡಿ. ಅದ್ದರಿಂದ ನಿಮಗೇ ನಷ್ಟ ಎಂದು ರಾಜ್ಯದ ಜನತೆಗೆ ಮನವಿ ಮಾಡ್ತೀನಿ. ಅವರು ತಮ್ಮ ರಾಜಕೀಯಕ್ಕೆ ನಿಮ್ಮನ್ನ ಉಪಯೋಗಿಸಿಕೊಳ್ತಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಹೆಚ್ಡಿಕೆ ಟಾಂಗ್ ನೀಡಿದ್ದಾರೆ.

ರಾಜೀನಾಮೆ ಬಗ್ಗೆ ಹೇಳಿಕೆ ನೀಡಿದ ಕುಮಾರಸ್ವಾಮಿ, ರೈತರ ಸಾಲ ಮನ್ನಾ ಮಾಡಿ. ಇಲ್ಲ ರಾಜೀನಾಮೆ ಕೊಡಿ ಅಂತ ನನ್ನ ಮೇಲೆ ಒತ್ತಡ ಹಾಕೋದು ಬೇಕಿಲ್ಲ.ನಾನು ರೈತರ ಸಾಲ ಮನ್ನ ಮಾಡ್ಲಿಲ್ಲ ಅಂದ್ರೆ ಖುದ್ದು ರಾಜೀನಾಮೆ ಕೊಡ್ತಿನಿ . ಯಾರೂ ನನಗೆ ಹೇಳುವ ಅಗತ್ಯ ಇಲ್ಲ ಎಂದು ಉತ್ತರಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಹೆಚ್ಡಿಕೆ, ಕಾಂಗ್ರೆಸ್ ನವರು ಹಣಕಾಸು ಖಾತೆ ಕೇಳ್ತಿದ್ದಾರೆ.. ಸಂಪುಟ ರಚನೆ ಸಂದರ್ಭದಲ್ಲಿ ಪ್ರಮುಖ ಖಾತೆಗಳನ್ನು ಕೇಳೊದು ಸಹಜ. ಇನ್ನೂ ಈ ಬಗ್ಗೆ ತೀರ್ಮಾನ ಆಗಬೇಕಿದೆ.. ಪ್ರಮುಖ ಖಾತೆಗಳ ಹಂಚಿಕೆಯಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ.. ಕೆಲವೊಂದು ಖಾತೆಗಳನ್ನು ಕೇಳೋದು ಸಾಮಾನ್ಯ..ಇದರಲ್ಲಿ ಯಾವುದೇ ರೀತಿಯ ಫೈಟ್ ಇಲ್ಲ...ನಾನು ಆರುವರೆ ಕೋಟಿ ಜನರ ಮುಲಾಜಿನಲ್ಲಿ ಇಲ್ಲ...ಬದಲಾಗಿ ಕಾಂಗ್ರೆಸ್ ನವರ ಮುಲಾಜಿ ನಲ್ಲಿದ್ದೇನೆ...ಒಂದು ವಾರ ಸಮಯ ಕೊಡಿ.. ಎಲ್ಲಾ ಸಚಿವ ಸಂಪುಟ ಸಂಬಂಧ ಎಲ್ಲಾ ಅಂತಿಮವಾದ ನಂತರ ಸಾಲ ಮನ್ನಾ ಬಗ್ಗೆ ನಿರ್ಧಾರ ಕೈಗೊಳ್ತೇನೆ ಎಂದು ಹೇಳಿದ್ದಾರೆ.

Next Story

RELATED STORIES