Top

ಫೈನಲ್​ ಪಂದ್ಯ ಗೆಲ್ಲಲು ಮೋದಿ ಮೊರೆ ಹೋದ ಧೋನಿ

ಮುಂಬೈ: ಈ ಬಾರಿಯ ಐಪಿಎಲ್​ ಗೆಲ್ಲೋದಕ್ಕೆ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ ಮಾಸ್ಟರ್​ ಪ್ಲಾನ್​ ಮಾಡಿದ್ದಾರೆ. ಲೀಗ್​ನಲ್ಲಿ ಚೆನ್ನೈ ತಂಡ ಒಳ್ಳೆಯ ಪ್ರದರ್ಶನ ನೀಡಿದ್ದರೂ 5 ಪಂದ್ಯಗಳಲ್ಲಿ ಸೋಲು ಕಂಡು ಫೈನಲ್​ ತಲುಪಿದೆ.

ಫೈನಲ್​ನಲ್ಲಿ ಬಲಿಷ್ಠ ಸನ್​ರೈಸರ್ಸ್ ತಂಡವನ್ನ ಎದುರಿಸಲಿದೆ. ಈಗಾಗಲೇ ಚೆನ್ನೈ ಸನ್​ರೈಸರ್ಸ್ ವಿರುದ್ಧ ಆಡಿದ ಮೂರು ಪಂದ್ಯಗಳನ್ನ ಗೆದ್ದಿದೆ. ಮೊನ್ನೆ ಕ್ವಾಲಿಫೈಯರ್​ ಒಂದರ ಪಂದ್ಯದಲ್ಲಿ ಪರದಾಡಿ ಗೆದ್ದುಕೊಂಡಿತು. ಇದು ಚೆನ್ನೈ ತಂಡವನ್ನ ಕಾಡುತ್ತಿದೆ. ಇದಕ್ಕೆ ನಾಯಕ ಧೋನಿ ಮಾಸ್ಟರ್​ ಪ್ಲಾನ್​ ಮಾಡಿದ್ದಾರೆ. ನಾಯಕ ಧೋನಿ, ಪ್ರಧಾನಿ ಮೋದಿ ಅವರ ಮೊರೆ ಹೋಗಿದ್ದಾರೆ. ಕೇಂದ್ರ ಸರ್ವ ಶಿಕ್ಷಣ ಅಭಿಯಾನದಲ್ಲಿ ಪಾಲ್ಗೊಳುತ್ತಿರುವ ಧೋನಿ ಈ ಯೋಜನೆಯನ್ನ ಪಕ್ಕದ ರಾಷ್ಟ್ರಗಳಿಗೂ ವಿಸ್ತರಿಸಿ ಎಂದು ಮನವಿ ಮಾಡಿದ್ದಾರೆ. ಇದು ಸನ್​ರೈಸರ್ಸ್ ತಂಡದಲ್ಲಿರುವ ಅಪ್ಘಾನಿಸ್ತಾನ ಬೌಲರ್​ ರಶೀದ್​ ಖಾನ್​ಗೂ ಸಹಾಯವಾಗಲಿದೆ. ಇದರಿಂದ ರಶೀದ್​ ಖಾನ್​ನ ಗಮನ ಸೆಳೆದು ಫೈನಲ್​ ಪಂದ್ಯವನ್ನ ಗೆಲ್ಲಬಹುದೆಂಬುದು ಧೋನಿ ಲೆಕ್ಕಚಾರವಾಗಿದೆಯಂತೆ. ಹೀಗಂತ ಸೋಶಿಯಲ್​ ಮೀಡಿಯಾದಲ್ಲಿ ಈ ಜೋಕ್​ ಹರಿದಾಡುತ್ತಿದೆ.

Next Story

RELATED STORIES