2 ತಿಂಗಳ ಬಳಿಕ ಪ್ರತ್ಯಕ್ಷವಾದ್ರು ಬಹದ್ಧೂರ್ ಗಂಡು..!

ಚೇತನ್ ಕುಮಾರ್ ನಿರ್ದೇಶನದ ಭರ್ಜರಿ ಚಿತ್ರದ ಯಶಸ್ಸಿನ ನಂತರ ದ್ರುವ ಸರ್ಜಾ ಪೊಗರು ಚಿತ್ರದಲ್ಲಿ ಮಗ್ನರಾಗಿದ್ದಾರೆ. 12 ವರ್ಷದ ಹುಡ್ಗ, 28ರ ಹರೆಯ ಯೆಂಗ್ ಆಂಡ್ ಎರ್ನಜಿಟಿಕ್ ಬಾಯ್, ಹೀಗೆ ಎರಡು ರೀತಿ ವಿಭಿನ್ನ ಶೇಡ್ವುಳ್ಳ ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ . ಎರಡು ಲುಕ್ಗಳು ಎಲ್ಲಿಯೂ ರಿವೀಲ್ ಆಗದಂತೆ ಮೆಟೈನ್ ಮಾಡುತ್ತಿದ್ದಾರೆ. ಇಷ್ಟಾದ್ರು ಪೊಗರು ಚಿತ್ರದ ಪೋಸ್ಗಳು ಅಲ್ಲಿ ಇಲ್ಲಿ ಲೀಕ್ ಆಗುತ್ತಲೇ ಬರುತ್ತಿವೆ. ಈಗ ಸ್ವತಃ ಧ್ರುವ ಸರ್ಜಾರವರೇ ತಮ್ಮ ಲುಕ್ನ ರಿವೀಲ್ ಮಾಡಿದ್ದಾರೆ.
ಭರ್ಜರಿ ಚಿತ್ರದ ನಂತರ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪೊಗರು ಚಿತ್ರದ ಶೂಟಿಂಗ್ ಸೆಟ್ನಲ್ಲಿ ಬೆವರು ಹರಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ನಂದಕಿಶೋರ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದೆ. 12ವರ್ಷದ ಹುಡ್ಗನ ಪಾತ್ರಕ್ಕಾಗಿ ಧ್ರುವ ಸರ್ಜಾ 30 ಕೆ.ಜಿ ತೂಕ ಇಳಿಸಿಕೊಂಡಿದ್ರು. ಈಗ ರಗಡ್ ಆಗಿ ಪೊಗರ್ದಸ್ತ್ ಪೋರನಾಗಿ ಕ್ಯಾಮೆರಾಗೆ ಡಿಚ್ಚಿ ಹೊಡೀತ್ತಿದ್ದಾರೆ.. ಧ್ರುವ ಸರ್ಜಾ ಲುಕ್ ಹೇಗಿರಲಿದೆ ಅನ್ನೋದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು, ಕೊನೆಗೂ ಆ ಕುತೂಹಲಕ್ಕೆ ತೆರೆಬಿದಿದೆ.. ಅತ್ತಿಗೆಗಾಗಿ ‘ಇರುವುದೆಲ್ಲವ ಬಿಟ್ಟು’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಹಾಜರಾಗಿ ಶುಭ ಕೋರಿ, ಪೊಗರು ಲುಕ್ನ್ನ ರಿವೀಲ್ ಮಾಡಿದ್ರು.