Top

ದರ್ಶನ್ ಪರಿಸರ ಪ್ರೇಮ! ಗಿಡ-ಮರ ಉಳಿಸಲು ಮನವಿ

ದರ್ಶನ್ ಪರಿಸರ ಪ್ರೇಮ! ಗಿಡ-ಮರ ಉಳಿಸಲು ಮನವಿ
X

ಇನ್ನೇನು ಪರಿಸರ ದಿನ ಬಂದೇ ಬಿಡ್ತು.. ಸಿನಿ ತಾರೆಯರೆಲ್ಲ ಪರಿಸರ ದಿನಕ್ಕೆ ಒಂದಲ್ಲಾ ಒಂದು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆಯಲ್ಲಿರುತ್ತಾರೆ.. ಹಾಗೆಯೇ ನಮ್ಮ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಕೂಡ ತಮ್ಮ ಅಭಿಮಾನಿಗಳಿಗಾಗಿ ಪರಿಸರ ದಿನಾಚರಣೆಯ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರಂತೆ..

ನಟ ದರ್ಶನ್​ ಅಭಿಮಾನಿಗಳಿಗೆ ಹಾಗೂ ನಾಡಿನ ಜನತೆಗಾಗಿ ಪರಿಸರ ದಿನದ ಅಂಗವಾಗಿ ವಿಶೇಷ ಮನವಿ ಮಾಡಲಿದ್ದಾರೆ. ಸುತ್ತ ಮುತ್ತಲಿನ ಗಿಡ-ಮರಗಳನ್ನು ಉಳಿಸಿ ಎಂದು ಕರೆ ನೀಡಲಿದ್ದಾರೆ. ಈಗಾಗಲೇ ಈ ವಿಡಿಯೋ ಮೂಲಕ ದರ್ಶನ್ ಜನರಲ್ಲಿ ಮನವಿ ಮಾಡಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಈ ವಿಡಿಯೋ ಪಡೆದಿದ್ದು. ಜೂನ್​ 5ರಂದು ಬಿಡುಗಡೆ ಮಾಡಲಿದ್ದಾರಂತೆ.

ಇನ್ನು ದರ್ಶನ್​ ಹೇಳಿರುವ ಸಂದೇಶವನ್ನು ಬಂಡಿಪುರ, ಮಲೆಮಾದೇಶ್ವರ, ನಾಗರಹೊಳೆ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ಪರಿಸರ ಕಾಳಜಿ ಈಗಿನ ಜನರಲ್ಲಿ ಎಷ್ಟು ಮುಖ್ಯ ಅನ್ನುವುದನ್ನು ಸಾರಲು ಅರಣ್ಯ ಇಲಾಖೆಯವರು ನಟ ದರ್ಶನ್​ ಅವರನ್ನ ಈ ಅಭಿಯಾನಕ್ಕೆ ಬರ ಮಾಡಿಕೊಂಡಿದ್ದರಂತೆ.

Next Story

RELATED STORIES