Top

ಐಪಿಎಲ್​ ಫೈನಲ್​ಗೆ ಸಿದ್ಧತೆ

ಐಪಿಎಲ್​ ಫೈನಲ್​ಗೆ ಸಿದ್ಧತೆ
X

ಇಂಡಿಯನ್​ ಪ್ರೀಮಿಯರ್​ ಲೀಗ್​ನ 11ನೇ ಆವೃತ್ತಿಗೆ ಭಾನುವಾರ ತೆರೆ ಬೀಳಲಿದೆ. ಪ್ರಶಸ್ತಿ ಗೆಲ್ಲಲು ಪ್ಲಾನ್​ ಮಾಡಿಕೊಂಡಿದ್ದ ಸೂಪರ್​ ತಂಡಗಳು ಟೂರ್ನಿಯಿಂದ ಹೊರ ಬಿದ್ದು ನಿರಾಸೆ ಅನುಭವಿಸಿವೆ. ಆದ್ರೆ 2ವರ್ಷದ ನಿಷೇಧದ ಬಳಿಕ ವಾಪಾಸಾಗಿರುವ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಮಾಜಿ ಚಾಂಪಿಯನ್​ ಸನ್​ ರೈಸರ್ಸ್​ ಹೈದ್ರಾಬಾದ್​ ತಂಡಗಳು ಪ್ರಶಸ್ತಿ ಎತ್ತುವ ಕನಸಿನಲ್ಲಿವೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.

ಸಿಎಸ್​ಕೆ ಮೊದಲ ಕ್ವಾಲಿಫೈಯರ್​ನಲ್ಲಿ ಸನ್​ ರೈಸಸ್​​ ತಂಡವನ್ನು ಸೋಲಿಸಿ ನೇರವಾಗಿ ಫೈನಲ್​ ಗೆ ಎಂಟ್ರಿ ಪಡೆದುಕೊಂಡಿದ್ದರೆ, ಸನ್ ರೈಸರ್ಸ್​, ಎಲಿಮಿನೇಟರ್​ನಲ್ಲಿ ಗೆದ್ದಿದ್ದ, ಕೆಕೆಆರ್ ತಂಡವನ್ನು ಕ್ವಾಲಿಫೈಯರ್​ 2ರಲ್ಲಿ ಸೋಲಿಸಿ ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ.

ಸಿಎಸ್​ಕೆ ಮತ್ತು ಎಸ್​ಆರ್​ಎಚ್​​ ತಂಡಗಳು ಈ ಬಾರಿಯ ಐಪಿಎಲ್​ನಲ್ಲಿ 4ನೇ ಬಾರಿ ಮುಖಾಮುಖಿಯಾಗುತ್ತಿವೆ. ಲೀಗ್​ನಲ್ಲಿ ಎರಡು ಬಾರಿ ಮತ್ತು ಕ್ವಾಲಿಫೈಯರ್​​ ನಲ್ಲಿ ಒಂದು ಬಾರಿ ಸನ್​ ರೈಸರ್ಸ್​ ತಂಡ ಧೋನಿ ಬಳಗದ ಮುಂದೆ ಸೋಲು ಕಂಡಿತ್ತು.

Next Story

RELATED STORIES