Top

ಫೈನಲ್‍ಗೆ ಸನ್‍ರೈಸರ್ಸ್ ಹೈದ್ರಾಬಾದ್

ಫೈನಲ್‍ಗೆ ಸನ್‍ರೈಸರ್ಸ್ ಹೈದ್ರಾಬಾದ್
X

ಕೋಲ್ಕತ್ತಾ: ರಶೀದ್ ಖಾನ್ ಅವರ ಆಲ್‍ರೌಂಡ್ ಆಟದ ನೆರವಿನಿಂದ ಸನ್‍ರೈಸರ್ಸ್ ಹೈದ್ರಾಬಾದ್ ತಂಡ ಫೈನಲ್ ತಲುಪಿದೆ. ನಾಳೆ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಬಲಿಷ್ಠ ಚೆನ್ನೈಸೂಪರ್ ಕಿಂಗ್ಸ್ ವಿರುದ್ಧ ಅಂತಿಮ ಕಾದಾಟ ನಡೆಸಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್‍ನಲ್ಲಿ ನಡೆದ ಕ್ವಾಲಿಪೈರ್ 2ರ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್‍ರೈಸರ್ಸ್ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ವೃದ್ದಿಮನ್ ಸಾಹ 35, ಶಿಖರ್ ಧವನ್ 34 ಮತ್ತು ರಶೀದ್ ಖಾನ್ ಅಜೇಯ 34 ರನ್ ಬಾರಿಸಿದ್ರು. 175 ರನ್‍ಗಳ ಸವಾಲಿನ ಮೊತ್ತ ಬೆನ್ನತ್ತಿದ ಕೋಲ್ಕತ್ತಾ ತಂಡ 20 ಓವರ್‍ನಲ್ಲಿ 9 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಕ್ರಿಸ್ ಲಿನ್ 48, ಶುಭಮಾನ್ ಗಿಲ್ 30 ರನ್ ಬಾರಿಸಿದ್ರು. ಸನ್‍ರೈಸರ್ಸ್ ಪರ ರಶೀದ್ ಖಾನ್ ಕೇವಲ 19 ರನ್ ನೀಡಿ 3 ವಿಕೆಟ್ ಪಡೆದ್ರು. ಕೋಲ್ಕತ್ತಾ 14 ರನ್‍ಗಳ ಜಯದೊಂದಿಗೆ ಫೈನಲ್ ಪ್ರವೇಶಿಸಿತು.

Next Story

RELATED STORIES