Top

ಸೈನಾ ನೆಹ್ವಾಲ್ ಜೀವನ ಆಧಾರಿತ ಚಿತ್ರಕ್ಕೆ ಶ್ರದ್ಧಾ ತಯಾರಿ!

ಸೈನಾ ನೆಹ್ವಾಲ್ ಜೀವನ ಆಧಾರಿತ ಚಿತ್ರಕ್ಕೆ ಶ್ರದ್ಧಾ ತಯಾರಿ!
X

ಈಗಾಗಲೇ ಬಾಲಿವುಡ್​ನಲ್ಲಿ ಹಲವಾರು ಕ್ರೀಡಾಪಟುಗಳ ಜೀವನಾಧಾರಿತ ಚಿತ್ರ ತೆರೆ ಮೇಲೆ ಬಂದು ಸೂಪರ್​ ಹಿಟ್​ ಆಗಿವೆ.. ಮೇರಿ ಕೋಂ, ಎಂ​.ಎಸ್​.ಧೋನಿ, ಭಾಗ್ ಮಿಲ್ಕಾ ಭಾಗ್​ ಸಿನಿಮಾಗಳ ಸಾಲಿಗೆ ಭಾರತೀಯ ಖ್ಯಾತ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್​ ಕೂಡ ಸೇರಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.. ಇನ್ನು ಸೈನಾ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ರದ್ಧಾ ಕಪೂರ್ ಭರ್ಜರಿ ತಯಾರಿ ಆರಂಭಸಿದ್ದಾರೆ.

ಶ್ರದ್ಧಾ ಮೊದಲನೇ ಹಂತದ ಬ್ಯಾಡ್ಮಿಂಟನ್​ ತರಬೇತಿ ಮುಗಿಸಿ, ಈಗ ಎರಡನೇ ಹಂತದ ಬಿರುಸಿನ ತಯಾರಿ ಆರಂಭಿಸಿದ್ದಾರಂತೆ. ಇದು ವಿಭಿನ್ನ ಚಿತ್ರ, ಕೇವಲ ನಟನೆ ಇದ್ದರಷ್ಟೇ ಸಾಲದು. ಜೊತೆಗೆ ಆಟದ ಬಗ್ಗೆ ಒಂದಷ್ಟು ಮಾಹಿತಿ ಇರಬೇಕು. ಜೊತೆಗೆ ತಾಂತ್ರಿಕವಾಗಿ ಆಡುವುದನ್ನು ತೋರಿಸಬೇಕಿದೆ.

ಈ ಕಾರಣಕ್ಕೆ ಶ್ರದ್ಧಾ ತರಬೇತಿ ಪಡೆಯುತ್ತಿದ್ದಾರೆ. ಬ್ಯಾಡ್ಮಿಂಟನ್ ಬಗ್ಗೆ ಶ್ರದ್ಧಾಗೆ ಗೊತ್ತಿಲ್ಲ ಎಂಬ ಕಾರಣಕ್ಕೆ ಮಾಜಿ ಶೆಟ್ಲರ್ ಪ್ರಕಾಶ್ ಪಡುಕೋಣೆ ಪುತ್ರಿ, ನಟಿ ದೀಪಿಕಾ ಪಡುಕೋಣೆ ಈ ಚಿತ್ರಕ್ಕೆ ಸೂಕ್ತ ಎಂಬ ನಿರ್ಧಾರಕ್ಕೆ ಚಿತ್ರತಂಡ ಬಂದಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈಗ ಆ ವದಂತಿಯನ್ನು ಶ್ರದ್ಧಾ ಅಲ್ಲಗಳೆದು ಪಾತ್ರಕ್ಕಾಗಿ ಪೂರ್ತಿ ತಯಾರಿ ನಡೆಸಿದ್ದಾರೆ. ಈಗಾಗಲೇ ಶ್ರದ್ಧಾ ಬ್ಯಾಡ್ಮಿಂಟನ್ ಸಾಕಷ್ಟು ಕಠಿಣ ತರಬೇತಿ ನಡೆಸಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ತರಬೇತಿ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.

Next Story

RELATED STORIES