Top

ಹುಟ್ಟುಹಬ್ಬದ ಸಂತಸದಲ್ಲಿ ಚಿನ್ನಾರಿ ಮುತ್ತ

ಹುಟ್ಟುಹಬ್ಬದ ಸಂತಸದಲ್ಲಿ ಚಿನ್ನಾರಿ ಮುತ್ತ
X

ಸ್ಯಾಂಡಲ್​ವುಡ್​ನ ಚಿನ್ನಾರಿ ಮುತ್ತ ವಿಜಯರಾಘವೇಂದ್ರ ಬಾಲ್ಯದಲ್ಲೇ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡ ಪ್ರತಿಭಾನ್ವಿತ ನಟ.ಇಂದು ವಿಜಯರಾಘವೇಂದ್ರ 38 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕುಟುಂಬದವ್ರು,ಸ್ನೇಹಿತರು,ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದ್ದು,ಸರಳವಾಗಿ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ.

ಬಾಲ್ಯದಿಂದ್ಲೇ ನಟನೆಯಲ್ಲಿ ತೊಡಗಿಸಿಕೊಂಡಿರೋ ವಿಜಯರಾಘವೇಂದ್ರ ಕಳೆದ 36 ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ.ನಿನಗಾಗಿ ಸಿನಿಮಾ ಮೂಲಕ ನಾಯಕನಟನಾಗಿ ಎಂಟ್ರಿ ಆದ ಇವ್ರು16 ವರ್ಷಗಳಲ್ಲಿ ಸಿನಿಮಾಗಳಲ್ಲಿ 45 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಜೊತೆಗೆ ಇದೀಗ ಕಿರುತೆರೆಯಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡಿದ್ದು, ಕನ್ನಡ ಜನತೆಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಇಂದು ಹುಟ್ಟುಹಬ್ಬದ ಸಂಭ್ರಮದ ಜೊತೆಗೆ ವಿಜಯರಾಘವೇಂದ್ರ ಅಭಿನಯದ ರಾಜ ಲವ್ಸ್​ ರಾಧೆ ಸಿನಿಮಾ ಥಿಯೇಟರ್ ಅಂಗಳದಲ್ಲಿ ಸೌಂಡ್ ಮಾಡ್ತಿರೋದು ಮತ್ತೊಂದು ಖುಷಿಯ ವಿಚಾರ. ಸದ್ಯ ಕಿಸ್ಮತ್ ಸಿನಿಮಾ ರಿಲೀಸ್​ ಗೆ ರೆಡಿಯಿದ್ದು, ಯದಾ ಯದಾಹಿ ಧರ್ಮಸ್ಯ ಸಿನಿಮಾ ಅನೌನ್ಸ್​ ಆಗಿದೆ. ಎನಿವೇ ನಮ್ಮ ಕಡೆಯಿಂದ ಕನ್ನಡದ ಚಿನ್ನಾರಿ ಮುತ್ತನಿಗೆ ಹುಟ್ಟುಹಬ್ಬದ ಶುಭಾಶಯಗಳು.

Next Story

RELATED STORIES