Top

ಪಾರುಲ್ ವಾಚ್ ಕದ್ದು ಸಿಕ್ಕಿಬಿದ್ದ ಓಲಾ ಚಾಲಕ!

ಪಾರುಲ್ ವಾಚ್ ಕದ್ದು ಸಿಕ್ಕಿಬಿದ್ದ ಓಲಾ ಚಾಲಕ!
X

ಪ್ಯಾರ್​ಗೆ ಆಗ್ಬುಟೈತೆ ಖ್ಯಾತಿಯ ನಟಿ ಪಾರೂಲ್ ಯಾದವ್, ಓಲಾ ಕ್ಯಾಬ್​ ಡ್ರೈವರ್​​ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟೆ ಅಲ್ಲ ಪೊಲೀಸ್ ಸ್ಟೇಷನ್​ನಲ್ಲಿ ದೂರು ದಾಖಲಿಸಿ, ಭದ್ರತೆ ಇಲ್ಲದ ಓಲಾ ವಿರುದ್ಧ ದನಿ ಎತ್ತಿದ್ದಾರೆ.

ಕಳೆದ ವಾರ ಬೆಂಗಳೂರಿನಿಂದ ಮುಂಬೈಗೆ ಪ್ರಯಾಣ ಬೆಳೆಸುವ ನಿಟ್ಟಿನಲ್ಲಿ ಓಲಾ ಬುಕ್ ಮಾಡಿದ್ದ ನಟಿ ಪಾರೂಲ್, ಏರ್​ಪೋರ್ಟ್​​ ಹೋಗುವ ವೇಳೆಗೆ ತಮ್ಮ ಎರಡು ದುಬಾರಿ ವಾಚುಗಳನ್ನ ಕಳೆದುಕೊಂಡಿದ್ದರು. ಅದೇ ಕ್ಯಾಬ್​ನ ಡ್ರೈವರ್ ಧೋನಿ ಸಾಯಿತೇಜಾ ವಾಚ್​ಗಳನ್ನ ಕದ್ದು ಪರಾರಿಯಾಗಿದ್ದ.

ಈ ಕುರಿತು ಪೊಲೀಸರ ಮೊರೆ ಹೋದ ನಟಿಗೆ ತಮ್ಮ ವಾಚ್​ಗಳು ಮರಳಿ ಸಿಕ್ಕಿವೆ. ಈ ಕುರಿತು ಕರ್ನಾಟಕ ಪೊಲೀಸರಿಗೆ ಧನ್ಯವಾದ ತಿಳಿಸಿರೋ ಪಾರೂಲ್, ಭದ್ರತೆ ಇಲ್ಲದ ಓಲಾ ಬಗ್ಗೆ ಎಚ್ಚರದಿಂದಿರಿ ಅಂತ ಸರಣಿ ಟ್ವೀಟ್ ಮಾಡಿದ್ದಾರೆ. ಈ ಸುದ್ದಿ ತಡವಾಗಿ ಬೆಳಕಿಗೆ ಬಂದಿದ್ದು, ಓಲಾ ಕ್ಯಾಬ್ ಡ್ರೈವರ್​ಗಳ ವಿಚಾರದಲ್ಲಿ ಎಚ್ಚರದಿಂದ ಇರಿ ಅಂತ ಪಾರೂಲ್ ಯಾದವ್ ಹೇಳಿದ್ದಾರೆ. ಅದರಲ್ಲೂ ಹೆಣ್ಣುಮಕ್ಕಳ ಕುರಿತು ಪಾರೂಲ್ ವಿಶೇಷವಾಗಿ ಟ್ವೀಟ್ ಮಾಡಿ ಜಾಗೃತಿ ಮೂಡಿಸಿದ್ದಾರೆ.

Next Story

RELATED STORIES