Top

ಪ್ರೀತ್ಸೆ ಅಂತ ಬಂದ ಮಹಿಳೆಯ ಕೊಲೆ : ಆರೋಪಿಯ ಬಂಧನ

ಪ್ರೀತ್ಸೆ ಅಂತ ಬಂದ ಮಹಿಳೆಯ ಕೊಲೆ : ಆರೋಪಿಯ ಬಂಧನ
X

ಬೆಂಗಳೂರು : ಕೂಲಿ ಕೆಲಸ ಮಾಡ್ಕೊಂಡಿದ್ದ ರಾಜು, ಬೆಂಗಳೂರಿನ ಕುರುಬರಹಳ್ಳಿಯಲ್ಲಿ ವಾಸವಾಗಿದ್ದನು. ತನ್ನ ಸೊಸೆ ಮೊಮ್ಮಕ್ಕಳ ಜೊತೆ ಕಾಲ ಕಳೀತಿದ್ದ ರಾಜು ಕುಡಿತದ ದಾಸನಾಗಿದ್ದ. ಸಂಜೆ ಆಯ್ತು ಅಂದ್ರೆ ಸಾಕು ಮನೆಮಂದಿಗೆಲ್ಲ ಕಿರಿಕಿರಿ ನೀಡ್ತಿದ್ದ. ಈತನ ಕಾಟಕ್ಕೆ ಕಳೆದ ಒಂದು ತಿಂಗಳಿನ ಹಿಂದೆ ಮನೆಮಂದಿಯೆಲ್ಲ ಮನೆಬಿಟ್ಟು ಹೋಗಿದ್ರಂತೆ. ಎಲ್ಲಾ ಇದ್ದೂ ಇಲ್ಲದಂತೆ ಬಿಕಾರಿ ತರಹ ಇದ್ದ ರಾಜು ಕಳೆದ ಒಂದು ವಾರದಿಂದ ರೇಣುಕಾ ಎಂಬ ಹೆಣ್ಮಗಳನ್ನ ಮನೆಗೆ ಕರೆತರ್ತಿದ್ನಂತೆ. ನೋಡಿದ್ರೆ ರೇಣುಕಾ ಮನೆಯಲ್ಲೇ ಕೊಲೆಯಾಗಿ ಹೋಗಿದ್ದಳು.

ಕೊಲೆಯಾದ ರೇಣುಕಾಗೂ ಮುದುಕಪ್ಪ ರಾಜೂಗೂ ಯಾವ್ದೇ ಸಂಬಂಧ ಇಲ್ಲ. ಆದ್ರೂ ಅದ್ಯಾವ ಕಾರಣಕ್ಕೆ ರಾಜುನ ಅರಸಿಕೊಂಡು ರೇಣುಕಾ ಬರ್ತಿದ್ಲು ಅನ್ನೋದು ಗೊತ್ತಾಗ್ತಿಲ್ಲ. ಒಂದಂತೂ ಸತ್ಯ ಮುದುಕಪ್ಪ ರಾಜು ರೋಡ್ ರೋಮಿಯೋ ಆಗಿದ್ದ, ಆಗಾಗ್ಗೆ ಮನೆ ಕಡೆ ಪರಸ್ತ್ರೀಯರನ್ನ ಕರೆತರ್ತಿದ್ದ ಅನ್ನೋದಕ್ಕೆ ನೆರೆಹೊರೆಯವರೇ ಸಾಕ್ಷಿ.

ಹೆಣ್ಣ, ಹೆಂಡಾ ಅಂತ ಕಂಡ ಕಂಡ ಕಡೆ ಗೂಳಿಯಂತೆ ನುಗ್ತಿದ್ದ ಮುದುಕಪ್ಪ ಇದೀಗ ಮಹಾಲಕ್ಷ್ಮಿ ಲೇಔಟ್ ಪೊಲೀಸರ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ಗೆ ಸುಸ್ತಾಗಿ ಹೋಗಿದ್ದಾನೆ. ಅನೈತಿಕ ಸಂಬಂಧದ ಕೊಂಡಿಯಲ್ಲೇ ಇನ್ವೆಸ್ಟಿಗೇಷನ್ ಶುರುವಾಗಿದೆ, ಒಳ-ಹೊರ ಕಾರಣಗಳು ಇನ್ನಷ್ಟೇ ತೆರೆದುಕೊಳ್ಳಬೇಕಾಗಿದೆ.

ವರದಿ :- ದತ್ತರಾಜ್ ಪಡುಕೋಣೆ, ಟಿವಿ5 ಬೆಂಗಳೂರು.

Next Story

RELATED STORIES