Top

ಯಶ್ KGF​ನ ಟಾರ್ಗೆಟ್ ಮಾಡ್ತಿದ್ದಾರಾ ವಿಲನ್..?

ಯಶ್ KGF​ನ ಟಾರ್ಗೆಟ್ ಮಾಡ್ತಿದ್ದಾರಾ ವಿಲನ್..?
X

ಕೆಜಿಎಫ್... ಸ್ಯಾಂಡಲ್​ವುಡ್​ನ ಈ ಸಿನಿಮಾ 50 ಕೋಟಿ ವಚ್ಚದಲ್ಲಿ , ಐದು ಭಾಷೆ, ಒಬ್ಬ ರಾಕಿಂಗ್ ಸ್ಟಾರ್ ಅಂತ ಸಖತ್ ಸೆನ್ಸೇಷನ್ ಸೃಷ್ಠಿಸಿರುವ ಸಿನಿಮಾ. ಅದರ ಬೆನ್ನಲ್ಲೀಗ ದಿ ವಿಲನ್ ಟೀಂ ಕೂಡ ಸುದೀಪ್-ಶಿವಣ್ಣ ಫ್ಯಾನ್ಸ್​ಗೆ ಬೊಂಬಾಟ್ ನ್ಯೂಸ್ ಕೊಟ್ಟಿದೆ. ಅದು ಬಹುತೇಕ ಕೆಜಿಎಫ್​ಗೆ ಸೆಡ್ಡು ಹೊಡೆಯೋ ಸೂಚನೆ ಕೊಟ್ಟಿದ್ದು, ಉದ್ಯಮ ಕೂಡ ಇದನ್ನು ಕಂಡು ದಂಗಾಗಿದೆ.

ಚಿನ್ನದ ನಾಡು ಕೋಲಾರದ ಕೆಜಿಎಫ್​ನ ಧೂಳಿನಲ್ಲಿ ಯಶ್ ಧೂಳೆಬ್ಬಿಸೋ ಪಾತ್ರದಲ್ಲಿ ಮಿಂಚಲಿದ್ದಾರೆ. ಅಂದಹಾಗೆ ಈ ಸಿನಿಮಾ ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಹೀಗೆ ಬರೋಬ್ಬರಿ ಐದು ಭಾಷೆಗಳಲ್ಲಿ ತೆರೆಗೆ ಬರ್ತಿದೆ. ಇದನ್ನ ಚಿತ್ರತಂಡವೇ ಅನೌನ್ಸ್ ಮಾಡಿದ್ದು, ಮೊಟ್ಟ ಮೊದಲ ಬಾರಿ ಕನ್ನಡದ ಸಿನಿಮಾವೊಂದು ಈ ರೀತಿ ಐದು ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗೋ ಮೂಲಕ ಹೊಸ ದಾಖಲೆ ಬರೆಯುವ ತವಕದಲ್ಲಿದೆ. ಆದ್ರೆ ಇದೇ ಹಾದಿನ ದಿ-ವಿಲನ್ ಹಿಡಿದಿದೆ.

ದಿ ವಿಲನ್... ರಾಕಿಂಗ್ ಸ್ಟಾರ್ ಕೆಜಿಎಫ್ ರೀತಿ ಕನ್ನಡ ಚಿತ್ರೋದ್ಯಮದಲ್ಲಿ ಬೇಜಾನ್ ಸೌಂಡ್ ಮಾಡ್ತಿರೋ ಮತ್ತೊಂದು ಮೋಸ್ಟ್ ಎಕ್ಸ್​ಪೆಕ್ಟೆಡ್ ಸಿನಿಮಾ. ಕಿಚ್ಚ ಸುದೀಪ್- ಸೆಂಚುರಿಸ್ಟಾರ್ ಶಿವಣ್ಣ ಜೋಡಿಯ ಮಲ್ಟಿಸ್ಟಾರ್ ಸಿನಿಮಾ. ಜೋಗಿ ಪ್ರೇಮ್ ನಿರ್ದೇಶನ, ಸಿಆರ್ ಮನೋಹರ್ ನಿರ್ಮಾಣದ ಬಿಗ್ ಬಜೆಟ್ ಸಿನಿಮಾ. ಇದೀಗ ಈ ವಿಲನ್, ಯಶ್​ರ ಕೆಜಿಎಫ್ ಸಿನಿಮಾನ ಟಾರ್ಗೆಟ್ ಮಾಡಿದಂತಿದೆ.

ಯೆಸ್... ತಾರಾಗಣದಲ್ಲಿ, ಬಜೆಟ್​ನಲ್ಲಿ, ಮೇಕಿಂಗ್ ಹೀಗೆ ಎಲ್ಲಾ ವಿಚಾರದಲ್ಲಿ ಕೆಜಿಎಫ್ ಮತ್ತು ದಿ ವಿಲನ್ ಪೈಪೋಟಿಗೆ ಇಳಿದಿವೆ. ಇದೀಗ ರಿಲೀಸ್​ ವಿಚಾರದಲ್ಲೂ ಅದೇ ಪೈಪೋಟಿ ಗೋಚರಿಸ್ತಾ ಇದೆ. ಹೌದು, ಯಶ್​ರ ಕೆಜಿಎಫ್ ಸಿನಿಮಾ ಐದು ಭಾಷೆಯಲ್ಲಿ ರಿಲೀಸ್ ಆದ್ರೆ, ದಿ ವಿಲನ್ ಅದಕ್ಕಿಂತ ಒಂದು ಹೆಚ್ಚು. ಅಂದ್ರೆ ಬರೋಬ್ಬರಿ 6 ಭಾಷೆಯಲ್ಲಿ ದಿ ವಿಲನ್ ರಿಲೀಸ್ ಆಗೋ ಮೂಲಕ ಕೆಜಿಎಫ್ ದಾಖಲೆಯನ್ನ ಬ್ರೇಕ್ ಮಾಡೋಕೆ ಹೊರಟಂತಿದೆ.

Next Story

RELATED STORIES