Top

ಸಂಪುಟ ಸಂಕಟ:ದೆಹಲಿಗೆ ಕಾಂಗ್ರೆಸ್ ನಾಯಕರು

ಸಂಪುಟ ಸಂಕಟ:ದೆಹಲಿಗೆ ಕಾಂಗ್ರೆಸ್ ನಾಯಕರು
X

ಸಚಿವ ಸಂಪುಟ ರಚನೆ ಬಿಕ್ಕಟ್ಟು ಹಿನ್ನೆಲೆ, ಕಾಂಗ್ರೆಸ್ ನಾಯಕರು ದೆಹಲಿಗೆ ದೌಡಾಯಿಸಿದ್ದಾರೆ.ಈಗಾಗಲೇ ಮಾಜಿ ನೀರಾವರಿ ಸಚಿವ ಎಂ.ಬಿ.ಪಾಟೀಲ್ ದೆಹಲಿಯಲ್ಲಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್, ವೇಣುಗೋಪಾಲ್, ಮಲ್ಲಿಕಾರ್ಜುನ್ ಖರ್ಗೆ , ಸಂಜೆ ಶಾಸಕರಾದ ಎಂ.ಟಿ.ಬಿ.ನಾಗರಾಜು, ಭೈರತಿ ಸುರೇಶ್ ,ಭೈರತಿ ಬಸವರಾಜು,ಎಸ್.ಟಿ.ಸೋಮಶೇಖರ್, ಸಿದ್ದುನ್ಯಾಮೇಗೌಡ,ಪಿ.ಟಿ.ಪರಮೇಶ್ವರ್ ನಾಯ್ಕ್, ಅಮರೇಗೌಡ ಬಯ್ಯಾಪೂರ,ಶಿವಾನಂದ ಪಾಟೀಲ್, ಪ್ರತಾಪ್ ಗೌಡ ಪಾಟೀಲ್ ದೆಹಲಿಗೆ ಹೊರಟಿದ್ದಾರೆ.ಇಂದು ರಾತ್ರಿ ಸೋನಿಯಾಗಾಂಧಿ ನೇತೃತ್ವದಲ್ಲಿ, ಸೋನಿಯಾ ನಿವಾಸದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಯಾರ್ಯಾರಿಗೆ ಯಾವ್ಯಾವ ಖಾತೆ ಸಿಗಲಿದೆ ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ.ಮೇ 29ರಂದು ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Next Story

RELATED STORIES