Top

ಇಂಟರ್ನೆಟ್​ ಆಳುತ್ತಿರುವ ಪುಟ್ಟ ಪೋರಿ!

ಇಂಟರ್ನೆಟ್​ ಆಳುತ್ತಿರುವ ಪುಟ್ಟ ಪೋರಿ!
X

ಎಲ್ಲಿ ನೋಡಿದ್ರು ಇವಳದ್ದೇ ಮಾತು.. ಯಾವ ಪೇಜ್​ ನೋಡಿದ್ರೂ ಇವಳದ್ದೇ ವೀಡಿಯೋಗಳು.. ಇವಳ ಡಬ್​ಸ್ಮ್ಯಾಶ್ ನೋಡಿದ್ರೆ ನಮ್ಮ ದಿಶಾ ಮದನ್​, ನಿವೇದಿತಾ ಗೌಡಾರನ್ನೂ ಮೀರಿಸುತ್ತಾಳೆ.. ಇವಳ ಆ್ಯಕ್ಷಿಂಗ್​ ನೋಡಿ ನಮ್ಮ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಕೂಡ ಕಂಮೆಂಟ್​ ಮಾಡಿದ್ದಾರೆ..​ ಯಾರಪ್ಪ ಈ ಪೋರಿ? ಅಷ್ಟೊಂದು ಚೆನ್ನಾಗಿಗೆ ಆ್ಯಕ್ಟಿಂಗ್​ ಮಾಡ್ತಾಳಾ ಅನ್ನೊ ಪ್ರಶ್ನೆಗೆ ಇಲ್ಲಿದೆ ಉತ್ತರ..

ಪ್ರಶ್ವಿತಾ, ಈ 6ವರ್ಷದ ಪುಟ್ಟ ಹುಡುಗಿ ಸಾಮಾಜಿಕ ಜಾಲತಾಣದಲ್ಲಿ ಹಿರೋಯಿನ್​ ಆಗಿಬಿಟ್ಟಿದ್ದಾಳೆ.. ಈಕೆ ಮಾಡುವ ಡಬ್​ಸ್ಮ್ಯಾಶ್​ಗೆ ಜನರು ಫಿದಾ ಆಗಿದ್ದಾರೆ.. ಇನ್​ಸ್ಟಾಗ್ರಾಮ್​ ಅಕೌಂಟ್​ ಓಪನ್​ ಮಾಡಿದ ಒಂದೇ ತಿಂಗಳಿಗೆ 13 ಸಾವಿರಕ್ಕೂ ಹೆಚ್ಚು ಜನರು ಈಕೆಯನ್ನ ಫಾಲೋ ಮಾಡುತ್ತಿದ್ದಾರೆ, ಈಕೆಯ ಪೋಸ್ಟ್​ಗಳನ್ನು ಲೈಕ್​ ಮಾಡುತ್ತಿದ್ದಾರೆ.. ಅಷ್ಟೇ ಅಲ್ಲದೆ ಪ್ರತ್ಯೇಕವಾಗಿ ಈಕೆಗೆ ಅಂತ ಫ್ಯಾನ್​ ಪೇಜ್​ಗಳು ಕೂಡ ಕ್ರಿಯೇಟ್​ ಆಗಿವೆ..

ಇನ್ನು ಸ್ಯಾಂಡಲ್​ವುಡ್​ನ ನಟಿಯರಾದ ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ ಹಾಗೂ ಟಗುರು ಪುಟ್ಟಿ ಮಾನ್ವಿತಾ ಹರೀಶ್​ ತಮ್ಮ ಇನ್​ಸ್ಟಾಗ್ರಾಮ್​ ಅಕೌಂಟ್​ ಮೂಲಕ ಪ್ರಶ್ವಿತಾಳಿಗೆ ಕಮೆಂಟ್​ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.. ಚಿಕ್ಕ ವಯಸ್ಸಿಗೆ ಇಷ್ಟೊಂದು ಜನರ ಮೆಚ್ಚುಗೆ ಪಡೆದ ಈ ಪುಟ್ಟ ಬಾಲೆ, ಮುಂದೊಂದು ದಿನ ದೊಡ್ಡ ಸ್ಟಾರ್ ಆಗೋದ್ರಲ್ಲಿ ಡೌಟೇ ಇಲ್ಲ..

Next Story

RELATED STORIES