Top

ಹೈವೋಲ್ಟೇಜ್ ಐಪಿಎಲ್ ಫೈನಲ್​: ಸೂಪರ್ ಕಿಂಗ್ಸ್​- ಸನ್​ರೈಸರ್ಸ್ ಫೈಟ್​

ಹೈವೋಲ್ಟೇಜ್ ಐಪಿಎಲ್ ಫೈನಲ್​: ಸೂಪರ್ ಕಿಂಗ್ಸ್​- ಸನ್​ರೈಸರ್ಸ್ ಫೈಟ್​
X

ಎರಡು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು 2016ರ ಚಾಂಪಿಯನ್ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಂಬೈನಲ್ಲಿ ನಡೆಯುವ 2018ರ ಆವೃತ್ತಿಯ ಐಪಿಎಲ್​ ಟಿ-20 ಕ್ರಿಕೆಟ್ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಸಮಬಲದ ಎರಡೂ ತಂಡಗಳ ನಡುವೆ ನಡೆಯಲಿರುವ ಈ ಪಂದ್ಯ ಇದಾಗಿರುವುದರಿಂದ ಅಭಿಮಾನಿಗಳಿಗೆ ರೋಚಕ ಫೈನಲ್ ಇದಾಗುವ ನಿರೀಕ್ಷೆ ಇದೆ.

ಎರಡು ವರ್ಷಗಳ ನಿಷೇಧದ ನಂತರ ಐಪಿಎಲ್​ಗೆ ಮರಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟೂರ್ನಿಯಲ್ಲಿ ಪೂರ್ಣ ಪ್ರಾಬಲ್ಯ ಮೆರೆಯದೇ ಇದ್ದರೂ ಲೀಗ್​ನಲ್ಲಿ ಎರಡನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿತ್ತು. ಧೋನಿ ಸಾರಥ್ಯದಲ್ಲಿ ಚೆನ್ನೈ ತಂಡ ಪ್ಲೇಆಫ್​ನಲ್ಲಿ ಹೈದರಾಬಾದ್ ವಿರುದ್ಧ ಹರಸಾಹಸ ಪಟ್ಟು ಗೆಲುವು ದಾಖಲಿಸಿ ಫೈನಲ್ ಪ್ರವೇಸಿತ್ತು. ಇದೀಗ ಇದೇ ತಂಡದ ವಿರುದ್ಧ ಮತ್ತೆ ಪ್ರಶಸ್ತಿಗಾಗಿ ಸ್ಪರ್ಧಿಸಬೇಕಾಗಿದೆ.

ಮತ್ತೊಂದೆಡೆ ಅತ್ಯಂತ ಕಡಿಮೆ ಮೊತ್ತ ದಾಖಲಿಸಿಯೂ ಅದನ್ನು ಅತೀ ಹೆಚ್ಚು ಬಾರಿ ಕಾಪಾಡಿಕೊಂಡ ಹೆಗ್ಗಳಿಕೆಗೆ ಹೈದರಾಬಾದ್​ಗೆ ಇದೆ. ಇದಕ್ಕೆ ಕಾರಣ ಆಫ್ಘಾನಿಸ್ತಾನದ ರಶೀದ್ ಖಾನ್ ಮತ್ತು ಬಾಂಗ್ಲಾದೇಶದ ಶಕೀಬ್ ಅಲ್​ ಹುಸೇನ್. ಬ್ಯಾಟಿಂಗ್ ವಿಭಾಗ ಕೂಡ ಉತ್ತಮವಾಗಿದೆ. ಕೇನ್ ವಿಲಿಯಮ್ಸನ್ ಅತೀ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

  • ಪಂದ್ಯ ಅರಂಭ: 7 ಗಂಟೆ
  • ಸ್ಥಳ: ಮುಂಬೈ, ವಾಂಖೇಡೆ ಕ್ರೀಡಾಂಗಣ

Next Story

RELATED STORIES