Top

ಚಿರುಗೆ ಮದುವೆ ಆದಮೇಲೆ ಬೆಳಗ್ಗೆ ಎದ್ದಾಗ ಭಯ ಅಂತೆ!

ಚಿರುಗೆ ಮದುವೆ ಆದಮೇಲೆ ಬೆಳಗ್ಗೆ ಎದ್ದಾಗ ಭಯ ಅಂತೆ!
X

ಇತ್ತೀಚೆಗಷ್ಟೆ ದಾಂಪತ್ಯಕ್ಕೆ ಕಾಲಿರಿಸಿದ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಜೋಡಿ ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಕೊನೆಗೂ ಈ ಜೋಡಿ ‘ಇರುವುದೆಲ್ಲವ ಬಿಟ್ಟು’ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೂ ಅಲ್ಲದೇ ಒಟ್ಟಿಗೆ ಕ್ಯಾಮೆರಾಗೆ ಪೋಸ್​ ಕೊಟ್ಟಿದೆ.

ನಿರ್ದೇಶಕ ಕಾಂತ ಕನ್ನಲ್ಲಿ ಕಲ್ಪನೆಯಲ್ಲಿ ಮೂಡಿಬಂದಿರುವ ‘ಇರುವುದೆಲ್ಲವ ಬಿಟ್ಟು’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಚಿರು ಮತ್ತು ಮೇಘನಾ ಜೋಡಿ ಮದುವೆ ನಂತರ ಮೊದಲ ಬಾರಿ ಕಾಣಿಸಿಕೊಂಡಿತು. ಕಥಾ ನಾಯಕಿ ಮಿಸ್ಸೆಸ್ ಮೇಘನಾ ಚಿರುಸರ್ಜಾ.. ಮಿಸ್ಸೆಸ್ ನಟಿಸಿರುವ ಸಿನಿಮಾ ಅಂದ್ಮೇಲೆ ಮಿಸ್ಟರ್ ಸರ್ಜಾ ಬರ್ದೇ ಇರೋಕ್ಕೆ ಆಗುತ್ತಾ ಹೇಳಿ..? ‘ಇರುವುದೆಲ್ಲವ ಬಿಟ್ಟು’ ಆಡಿಯೋ ಲಾಂಚಿಂಗ್​ ಪ್ರೋಗ್ರಾಂ​​ಗೆ ಚಿಫ್ ಗೆಸ್ಟ್​ ಆಗಿ ಚಿರು ಬಂದಿದ್ರು. ಆಗ ನವ ದಂಪತಿಗಳ ಕೈಯಲ್ಲಿ ಕೇಕ್ ಕಟ್​​ ಮಾಡಿಸಿ ಸಂಭ್ರಮ ಪಟ್ಟಿತ್ತು ಚಿತ್ರತಂಡ. ಈ ಸಂಧರ್ಭದಲ್ಲಿ ಚಿರು ಸರ್ಜಾ ತಮ್ಮ ಮದುವೆ ದಿನಗಳ ಡಿಫೆರೆಂಟ್​ ಎಕ್ಸ್​ಪಿರಿಯೆನ್ಸ್​ನ ಹಂಚಿಕೊಂಡಿದ್ದಾರೆ. ಚಿರಂಜೀವಿ ಸರ್ಜಾಗೆ ತಾ ಮೆಚ್ಚಿದ ಹುಡ್ಗಿ ಮೇಘನಾ ರಾಜ್​ರನ್ನು ಮದುವೆಯಾದ್ಮೇಲೆ ವಿಚಿತ್ರ ಅನುಭವ ಆಗ್ತಿದ್ಯಂತೆ.

ಹೌದು, ಹೀಗೆ ಹೇಳಿದ್ದು ಚಿರಂಜೀವ ಸರ್ಜಾ..! ಗಾಬರಿಯಾಗಬೇಡಿ ಚಿರು ಹೀಗೆ ಹೇಳಿದ್ದು ತಮಾಷೆಗೆ. ಇಷ್ಟು ದಿನ ಒಬ್ಬನೇ ಮಲಗುತ್ತಿದೆ, ಆದ್ರೆ ಈಗ ನನ್ನ ಪಕ್ಕ ಮೆಘನಾ ಇರ್ತಾಳೆ. ಸಡನ್​ಆಗಿ ಬೆಳಗ್ಗೆ ಎದ್ದಾಗ ಅಯ್ಯೋ ನನ್ನ ಪಕ್ಕಾ ಯಾರೋ ಮಲಗಿದ್ದಾರಲ್ಲ ಎಂದು ಹೆದರಿಕೆಯಾಗುತ್ತೆ. ಆಮೇಲೆ ಸರಿಯಾಗಿ ಎಚ್ಚರಿಕೆಯಾದ್ಮೆಲೆ ಗೊತ್ತಾಗೋದು ಓ ಇವಳು ನನ್ನ ಹೆಂಡತಿ ಎಂದು. ಚಿರುರವರ ಈ ಮಾತಿನಿಂದ ನೆರೆದ ಮಂದಿ ಗೊಳ್ಳೆಂದು ನಕ್ಕರು.

ಮೆಘನಾ ರಾಜ್ ನಟನೆಯ ಇರುವುದೆಲ್ಲವ ಬಿಟ್ಟು ಚಿತ್ರದ ಆಡಿಯೋ ರಿಲೀಸ್ ಆಗಿದ್ದು. ಹಾಡುಗಳು ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆಯಲ್ಲಿ ಮಧುರವಾಗಿ ಮೂಡಿಬಂದಿವೆ. ಚಿತ್ರದ ಪ್ರೋಸ್ಟ್​ ಪ್ರೋಡಕ್ಷನ್ ಹಂತ ತಲುಪಿದ್ದು , ಇನ್ನೇನು ಕೆಲವೇ ದಿನಗಳಲ್ಲಿ ಸೆನ್ಸಾರ್ ಮಂಡಳಿಯ ಬಾಗಿಲು ಬಡಿಯಲ್ಲಿದೆ ಚಿತ್ರತಂಡ.

Next Story

RELATED STORIES