Top

ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಸಿಗಲಿದೆ- ಪರಮೇಶ್ವರ್

ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಸಿಗಲಿದೆ- ಪರಮೇಶ್ವರ್
X

ಬೆಂಗಳೂರು: ಇಂದು ಸದನದಲ್ಲಿ ನಡೆಯಲಿರುವ ವಿಶ್ವಾಸಮತಯಾಚನೆಯಲ್ಲಿ ಸಮಿಶ್ರ ಸರ್ಕಾರಕ್ಕೆ ಬಹುಮತ ಸಿಗಲಿದೆ ಎಂದು ಡಿಸಿಎಂ ಪರಮೇಶ್ವರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಇಂದು ಸದನದಲ್ಲಿ ವಿಶ್ವಾಸಮತಯಾಚನೆ ನಡೆಯಲಿದೆ. ನಮ್ಮ ಸದಸ್ಯರಿಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಸಿಗಲಿದೆ ಅದರಲ್ಲಿ ಯಾವುದೇ ಅನುಮಾನ ಬೇಡ ಅಂತಾ ಹೇಳಿದ್ರು. ಇನ್ನೂ ಆರ್‌.ಆರ್‌.ನಗರ ಕ್ಷೇತ್ರದ ಚುನಾವಣೆ ಅಭ್ಯರ್ಥಿ ಗೊಂದಲದ ಕುರಿತು ಮಾತನಾಡಿದ ಅವರು ನಮ್ಮ ಅಭ್ಯರ್ಥಿ ಹಾಕಿದ್ದೇವೆ. ಅವರೂ ಅಭ್ಯರ್ಥಿ ಹಾಕಿದ್ದಾರೆ. ಇನ್ನೆರಡು ದಿನ ಮಾತ್ರ ಅವಕಾಶವಿದೆ. ಇವತ್ತು ಮತ್ತೆ ಜೆಡಿಎಸ್ ನಾಯಕರ ಮನವೊಲಿಸುತ್ತೇವೆ ಎಂದರು.

Next Story

RELATED STORIES