ಕರಾಳ ರಾತ್ರಿಯಲ್ಲಿ ಕಾಡಲಿದ್ದಾರೆ ಶಕೀಲಾ..!

ಶಕೀಲಾ..ಎವರ್ಗ್ರೀನ್ ಸೆಕ್ಸ್ ಸಿಂಬಲ್. ಒಂದ್ಕಾಲದಲ್ಲಿ ಶಕೀಲಾ ಸಿನಿಮಾಗಳನ್ನ ನೋಡೋಕೆ ಪಡ್ಡೆಹೈಕಳು ಕ್ಯೂ ನಿಲ್ತಿದ್ರು. ಈಕೆಯ ಸಿನಿಮಾ ರಿಲೀಸ್ ಅಂದ್ರೆ ಮಾಲಿವುಡ್ ಸೂಪರ್ ಸ್ಟಾರ್ಸ್ ಬೆಚ್ಚಿ ಬೀಳ್ತಿದ್ರು. ಬಿ ಗ್ರೇಡ್ ಸಿನಿಮಾಗಳಿಂದ ಅಷ್ಟರಮಟ್ಟಿಗೆ ಸಂಚಲನ ಸೃಷ್ಟಿಸಿದ್ದ ನಟಿ ಶಕೀಲಾ. ಈ ಮದನಾರಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡು ಪಡ್ಡೆಹೈಕಳ ಮೈ ಬೆಚ್ಚಗಾಗಿಸುತ್ತಿದ್ದ ದಿನಗಳಿದ್ವು. ಈಕೆ ನಟಿಸಿದ ಸಿನಿಮಾಗಳ ಕ್ರೇಜ್ ಹೇಗಿತ್ತು ಅಂದ್ರೆ ಮಲಯಾಳಂನಲ್ಲಿ ಸಿದ್ಧವಾಗ್ತಿದ್ದ ಸಿನಿಮಾಗಳು ದೇಶದ ಹಲವು ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗ್ತಿದ್ವು. ನೇಪಾಳ, ಚೀನಾ ಭಾಷೆಗೂ ಈಕೆಯ ಸಿನಿಮಾಗಳು ಡಬ್ ಆದ ಉದಾಹರಣೆಯಿದೆ.
ಒಂದು ಕಾಲದಲ್ಲಿ ಮಾಲಿವುಡ್ ಸೆಕ್ಸ್ ಬಾಂಬ್ ಅನ್ನಿಸಿಕೊಂಡಿದ್ದ ಶಕೀಲಾ ಇತ್ತೀಚಿನ ದಿನಗಳಲ್ಲಿ ಪೋಷಕ ಪಾತ್ರಗಳಲ್ಲಿ ಹೆಚ್ಚು ಹೆಚ್ಚು ಅಭಿನಯಿಸ್ತಿದ್ದಾರೆ. ಹೀಗೆ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದ ಶಕೀಲಾ, ಈಗ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವೊಂದರ ಮೂಲಕ ಅಭಿಮಾನಿಗಳನ್ನ ರಂಜಿಸೋಕೆ ಬರ್ತಿದ್ದಾರೆ. ಆ ಚಿತ್ರದ ಹೆಸ್ರು ‘ಶೀಲವತಿ’. ಕೆಲದಿನಗಳ ಹಿಂದೆ ಶಕೀಲಾ ಸಿಗರೇಟ್ ಹಿಡ್ದು ಖಡಕ್ ಫೋಸ್ ಕೊಟ್ಟಿದ್ದ ಶೀಲವತಿ ಪೋಸ್ಟರ್ಸ್ ವೈರಲ್ಲಾಗಿತ್ತು. ಸದ್ಯ ಶಕೀಲಾ ಮಾದಕ ನೋಟದ ಜೊತೆಗೆ ಭರ್ಜರಿ ಡೈಲಾಗ್ ಹೊಡೆಯುವ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡ್ತಿದೆ.
‘ಶೀಲವತಿ’ ಸಾಯಿ ರಾಮ್ ದಾಸರಿ ಪರಿಕಲ್ಪನೆಯಲ್ಲಿ ಮೂಡಿಬರ್ತಿರೋ ಸಿನಿಮಾ. ಶಕೀಲಾ ಸಿನಿ ಪಯಣದ 250ನೇ ಸಿನಿಮಾ ಅನ್ನೋದು ಈ ಚಿತ್ರದ ಹೆಗ್ಗಳಿಕೆ. ‘ಶೀಲವತಿ’ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದಂತೆ ಯುಟ್ಯೂಬ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಟಾಲಿವುಡ್ ಪ್ರೇಕ್ಷರ ಮುಂದೆ ಶಕೀಲಾ ‘ಶೀಲವತಿ’ ಅವತಾರದಲ್ಲಿ ದರ್ಶನ ಕೊಡಲಿದ್ದಾರೆ.