Top

ಯೂಟ್ಯೂಬ್​ನಲ್ಲಿ ಜಂಗಲ್ ಮೋಗ್ಲಿ ಮೋಡಿ

ಯೂಟ್ಯೂಬ್​ನಲ್ಲಿ ಜಂಗಲ್ ಮೋಗ್ಲಿ ಮೋಡಿ
X

ಆ್ಯಂಡಿ ಸೆರ್ಕಿಸ್ ನಿರ್ದೇಶನದ ಲೈವ್ ಆ್ಯಕ್ಷನ್ ಅಡ್ವೆಂಚರ್ ಫ್ಯಾಂಟಸಿ ಸಿನಿಮಾ ಮೋಗ್ಲಿ. ಜಂಗಲ್ ಬುಕ್ ಆಧರಿಸಿ, ತೆರೆಗೆ ಬರ್ತಿರೋ ಈ ಸಿನಿಮಾ ಟ್ರೈಲರ್ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಅಮೇರಿಕಾದಲ್ಲಿ ನೆಲೆಸಿರೋ ಭಾರತೀಯ ಮೂಲದ ದಂಪತಿಗಳ ಮಗ ರೋಹನ್ ಚಾಂದ್ ಈ ಬಾರಿ ಮೋಗ್ಲಿ ಅವತಾರದಲ್ಲಿ ಕಿಕ್ ಕೊಡೋಕೆ ಬರ್ತಿದ್ದಾನೆ. ಸದ್ಯ ಈ ಚಿತ್ರದ ಅಫೀಷಿಯಲ್ ಟ್ರೈಲರ್ ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿದೆ.

ಹಳೇ ಕಥೆಯನ್ನ ಹೊಸದಾಗಿ ಪ್ರಸೆಂಟ್ ಮಾಡಿ ಬಾಕ್ಸಾಫೀಸ್​ ದೋಚುವ ಲೆಕ್ಕಾಚಾರದಲ್ಲಿದೆ ಆ್ಯಂಡಿ ಸೆರ್ಕಿಸ್ ಅಂಡ್ ಟೀಮ್. ಮೊದಲ ನೋಟದಲ್ಲೇ ಮೋಗ್ಲಿ ಟ್ರೈಲರ್ ಭರವಸೆ ಮೂಡಿಸಿದ್ದು, ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಕ್ರೂರ ಪ್ರಾಣಿಗಳ ನಡುವೆ ಬೆಳೆಯುವ ಅನಾಥ ಹುಡುಗ ಮೋಗ್ಲಿ ಕಥೆ ಈ ಬಾರಿ ಮತ್ತಷ್ಟು ರೋಚಕತೆಯಿಂದ ಕೂಡಿದ್ದು, ಪ್ರೇಕ್ಷಕರಿಗೆ ಮಗದಷ್ಟು ಥ್ರಿಲ್ ಕೊಡೋ ಸೂಚನೆ ಸಿಕ್ತಿದೆ.

ಕೊಂಚ ದೊಡ್ಡವನಾದ ಮೋಗ್ಲಿ, ಕಾಡಿನ ಪ್ರಾಣಿಗಳ ಜೊತೆ ಸಂತೋಷವಾಗಿರೋ ಸಮಯದಲ್ಲೇ ಮನುಷ್ಯರ ಕಣ್ಣಿಗೆ ಬೀಳ್ತಾನೆ. ಕಾಡಿನಲ್ಲಿ ಪ್ರಾಣಿಗಳ ನಡುವೆ ಬೆಳೆದ ಮೋಗ್ಲಿ ಮುಂದೆ ನಾಡಿನಲ್ಲಿ ಜನರ ಮಧ್ಯೆ ಯಾಕೆ ಜೀವಿಸುವಂತಾಗುತ್ತೆ..? ಕಾಡಿಗೆ ಬಂದ ಆಪತ್ತು ಏನು..? ಮೋಗ್ಲಿ ನಾಡಲ್ಲೇ ಉಳಿತ್ತಾನಾ, ಇಲ್ವಾ..? ಅನ್ನೋದು ಗೊತ್ತಾಗ್ಬೇಕು ಅಂದ್ರೆ, ಸಿನಿಮಾ ತೆರೆಗೆ ಬರೋವರೆಗೂ ಕಾಯಲೇಬೇಕು.

ಯೂಟ್ಯೂಬ್​ಗೆ ಅಪ್​ಲೋಡ್ ಆದ ಎರಡೇ ದಿನದಲ್ಲಿ ಮೋಗ್ಲಿ ಸಿನಿಮಾ ಟ್ರೈಲರ್ 10 ಮಿಲಿಯನ್​ಗೂ ಹೆಚ್ಚು ವೀವ್ಸ್ ಪಡೆದುಕೊಂಡು ಸೌಂಡ್ ಮಾಡ್ತಿದೆ. ಕಳೆದೆರಡು ದಿನಗಳಿಂದ ಯೂಟ್ಯೂಬ್​ ಟ್ರೆಂಡ್ರಿಂಗ್​​ನಲ್ಲಿ ಎರಡನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಈ ಬಹುನಿರೀಕ್ಷಿತ ಹಾಲಿವುಡ್ ಚಿತ್ರ ಅಕ್ಟೋಬರ್ 19ಕ್ಕೆ ತೆರೆಗಪ್ಪಳಿಸಲಿದೆ.

Next Story

RELATED STORIES