Top

ಇಂದು ಕೋಲ್ಕತ್ತಾ, ಸನ್‍ರೈಸರ್ಸ್ ನಾಕೌಟ್ ಫೈಟ್

ಇಂದು ಕೋಲ್ಕತ್ತಾ, ಸನ್‍ರೈಸರ್ಸ್ ನಾಕೌಟ್ ಫೈಟ್
X

ಕೋಲ್ಕತ್ತಾ: ಐಪಿಎಲ್‍ನ ನಿರ್ಣಾಯಕ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಇಂದು ಎರಡು ಬಾರಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‍ರೈಸರ್ಸ್ ತಂಡಗಳು ಸೆಣಸಲಿವೆ. ಕ್ರಿಕೆಟ್ ಕಾಶಿ ಕೋಲ್ಕತ್ತಾದಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್‍ನಲ್ಲಿ ದಿನೇಶ್ ಕಾರ್ತಿಕ್ ಮತ್ತು ಕೇನ್ ವಿಲಿಯಮ್ಸನ್ ಪಡೆ ಪ್ರಶಸ್ತಿಗೆ ಸುತ್ತಿಗೆ ಹೋಗಲು ದೊಡ್ಡ ಹೋರಾಟವನ್ನೆ ನಡೆಸಲಿವೆ. ಲೀಗ್‍ನಲ್ಲಿ ಈ ಎರಡು ತಂಡಗಳು ತಲಾ ಒಂದೊಂದು ಪಂದ್ಯಗಳನ್ನ ಗೆದ್ದು ಸಮಬಲ ಸಾಧಿಸಿವೆ. ಮೊನ್ನೆ ನಡೆದ ಕ್ವಾಲಿಫೈಯರ್ ಒಂದರಲ್ಲಿ ಚೆನ್ನೈ ವಿರುದ್ಧ ಸನ್‍ರೈಸರ್ಸ್ ವಿರೋಚಿತ ಸೋಲು ಅನುಭವಿಸಿತ್ತು. ಇನ್ನು ಕೋಲ್ಕತ್ತಾ ತಂಡ ತವರಿನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಇಂದು ನಡೆಯುವ ಪಂದ್ಯಕ್ಕೆ ಮಳೆ ಭೀತಿ ಇದೆ.

Next Story

RELATED STORIES