Top

ಗಡಿಭಾಗದಲ್ಲಿ ಅಕ್ರಮ ಚಟುವಟಿಕೆ ಹಿನ್ನಲೆ : ಭಾರತ-ಬಾಂಗ್ಲಾ ಗಡಿ ಬಂದ್

ಗಡಿಭಾಗದಲ್ಲಿ ಅಕ್ರಮ ಚಟುವಟಿಕೆ ಹಿನ್ನಲೆ : ಭಾರತ-ಬಾಂಗ್ಲಾ ಗಡಿ ಬಂದ್
X

ಅಸ್ಸಾಂ : ಅಸ್ಸಾಂನ ಗಡಿ ಭಾಗದಲ್ಲಿ, ಅಕ್ರಮ ಚಟುವಟಿಕೆಗಳ ತಾಣವಾದ ಹಿನ್ನಲೆಯಲ್ಲಿ, ಭಾರತ-ಬಾಂಗ್ಲಾ ಗಡಿ ಬಂದ್‌ಗೆ ಅಸ್ಸಾಂ ಸರ್ಕಾರ ಚಿಂತನೆ ನಡೆಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸರ್ಬಾ ಸೋನಾವಾಲ್, ಅಸ್ಸಾಂನಲ್ಲಿನ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯನ್ನು ಡಿಸೆಂಬರ್‌ನಲ್ಲಿ ಮುಚ್ಚಲಾಗುತ್ತದೆ. ಇದಕ್ಕೆ ಕಾರಣ, ಗಡಿಭಾಗದಲ್ಲಿ ಅಕ್ರಮ ಚಟುವಟಿಕೆ, ಕಳ್ಳಸಾಗಣೆ ಮತ್ತು ಒಳನುಸುಳುವಿಕೆಯನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹೀಗೆ ಭಾರತ-ಬಾಂಗ್ಲಾ ಗಡಿ ಬಂದ್ ಆಗೋದ್ರಿಂದ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಅಕ್ರಮ ವಲಸಿಗರು ಗಡಿ ಮೂಲಕ ಒಳನುಸುಳುವಿಕೆ, ಮತ್ತು ಕಳ್ಳಸಾಗಣೆಯಂತ ದಂಧೆಗೆ ಬ್ರೇಕ್ ಬೀಳಲಿದೆ.

Next Story

RELATED STORIES