ಪ್ರೊಮೊ ಬಿಟ್ಟು ಎಡವಟ್ಟು ಮಾಡಿಕೊಂಡ ಹಾಟ್ಸ್ಟಾರ್

X
TV5 Kannada25 May 2018 5:44 AM GMT
ಕೋಲ್ಕತ್ತಾ : ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಮತ್ತು ಕೋಲ್ಕತ್ತಾ ತಂಡಗಳು ಅಂತಿಮ ಕಾದಾಟ ನಡೆಸಲಿವೆ ಎಂದು ಹಾಟ್ಸ್ಟಾರ್ ಲೈವ್ ವೆಬ್ಸೈಟ್ ಪ್ರೊಮೊ ಬಿಟ್ಟು ದೊಡ್ಡ ಎಡವಟ್ಟು ಮಾಡಿಕೊಂಡಿದೆ.
ಇದರಿಂದಾಗಿ ಈ ಬಾರಿಯ ಐಪಿಎಲ್ ಟೂರ್ನಿ ಮೇಲೆ ಅನುಮಾನ ಮೂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಆರಂಭವಾಗಿವೆ. ಸನ್ರೈಸರ್ಸ್ ಮತ್ತು ಕೋಲ್ಕತ್ತಾ ನಡುವಿನ ಕ್ವಾಲಿಫೈಯರ್ನ ಎರಡನೇ ಪಂದ್ಯ ಇಂದು ನಡೆಯಬೇಕು. ಇದಕ್ಕೂ ಮುನ್ನವೇ ಫೈನಲ್ನಲ್ಲಿ ಚೆನ್ನೈ ಮತ್ತು ಕೋಲ್ಕತ್ತಾ ಅಂತಿಮ ಕಾದಾಟ ನಡೆಸಲಿವೆ ಎಂದು ಹೇಗೆ ಹೇಳುತ್ತೀರಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
Next Story