Top

ಅಂತರಾಷ್ಟ್ರೀಯ ವೇದಿಕೆಯಲ್ಲಿ ನಟಿ ಮಣಿಯರ ಧ್ವನಿ..!

ಅಂತರಾಷ್ಟ್ರೀಯ ವೇದಿಕೆಯಲ್ಲಿ ನಟಿ ಮಣಿಯರ ಧ್ವನಿ..!
X

ಇದು ಇಂದು -ನೆನ್ನೆಯ ಮಾತಲ್ಲ. ದಶಕಗಳಿಂದ ಪ್ರತಿಯೊಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯ ಮಾತಿದು.. 'ನಾವು ಯಾವ ಪುರುಷನಿಗು ಕಡಿಮೆ ಇಲ್ಲ. ಪುರುಷರು ಮಾಡಬಹುದಾದ ಕೆಲಸವನ್ನೆಲ್ಲ ನಾವು ಮಾಡಬಹುದು' ಅಂತ ಅಂದಿನಿಂದ ಇಂದಿನವರೆಗೆ ಮಹಿಳೆಯರು ಹೇಳುತ್ತಲೇ ಇದ್ದಾರೆ. ಎಷ್ಟು ಹೇಳಿದ್ರು ಅಷ್ಟೆ ನಮ್ಮ ಸಮಾಜದಲ್ಲಿ ಮೇಲ್​ ಡಾಮಿನೇಶನ್​ ಅನ್ನೊದು ರಕ್ತದಲ್ಲೆ ಬಂದಿದೆ. ಈಗ ಮತ್ತೆ ಯಾಕೆ ಈ ಮಾತುಗಳು ಅಂತಿರಾ? ಅದಕ್ಕೆ ಕಾರಣ ಇದೆ.

ಚಿತ್ರರಂಗದಲ್ಲಿ ನಟರಿಗಿಂತ ನಟಿಯರಿಗೆ ಸಂಭಾವನೆ ಕಡಿಮೆ ಅನ್ನೊ ವಿಷಯ ಎಲ್ಲರಿಗು ಗೊತ್ತೆ ಇದೆ. ಈ ಬಗ್ಗೆ ಅನೇಕ ಬಾರಿ ನಟಿಮಣಿಯರು ಕೂಡ ಧನಿ ಎತ್ತಿದ್ದಾರೆ.ಯೆಸ್​, ಸಂಭಾವನೆ ಸಮಾನತೆ ಬಗ್ಗೆ ಕೂಗು ಕೇಳಿ ಬಂದಿರುವುದು ಪ್ರತಿಷ್ಠಿತ ಕಾನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ. ಒಂದು ದೊಡ್ಡ ವೇದಿಕೆ ಮೇಲೆ ಸಮಾನತೆಯ ಬಗ್ಗೆ ಕೂಗು ಮೊಳಗಿದ್ದು ಅಲ್ಲಿ ನೆರೆದಿದ್ದ ಅನೇಕ ಚಿತ್ರರಂಗದ ಗಣ್ಯರು ಇದರ ಬಗ್ಗೆ ಯೋಚಿಸುವಂತೆ ಮಾಡಿದೆ.

ಅಲ್ಲದೆ ಅಲ್ಲಿ ಮೊಳಗಿದ ಕೂಗು, ಎಷ್ಟರ ಮಟ್ಟಿಗೆ ಹರಿದಾಡಿದೆ ಅಂದ್ರೆ ಫ್ರಾನ್ಸ್​ನಿಂದ ಮುಂಬೈಗೆ ತಲುಪಿ, ಅಲ್ಲಿಂದ ಬೆಂಗಳೂರಿಗು ತಲುಪಿದೆ. ಈ ಬಗ್ಗೆ ಬಾಲಿವುಡ್​ ನಟಿಯರಾದ ದೀಪಿಕಾ ಪಡುಕೋಣೆ, ಕಂಗನಾ ರನೋತ್​​​​, ಸ್ವರಾ ಭಾಸ್ಕರ್​ ಅಷ್ಟೆ ಯಾಕೆ ಕನ್ನಡದ ನಟಿ ಭಾವನಾ ಸೇರಿದಂತೆ ಹಲವರು ಸಮಾನ ವೇತನಕ್ಕಾಗಿ ಧನಿ ಎತ್ತಿದ್ದಾರೆ.

Next Story

RELATED STORIES