Top

ಸಾಲಭಾದೆ ತಾಳದೆ ರೈತ ಆತ್ಮಹತ್ಯೆ

ಸಾಲಭಾದೆ ತಾಳದೆ ರೈತ ಆತ್ಮಹತ್ಯೆ
X

ಬಾಗಲಕೋಟೆ : ಸಾಲದ ಭಾದೆ ತಾಳಲಾರದೇ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಜಮ್ಮನಕಟ್ಟಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ರೈತನನ್ನ 51 ವಷ೯ದ ರಾಜಪ್ಪ ಜಲಗೇರಿ ಎಂದು ಗುರುತಿಸಲಾಗಿದೆ.

ರಾಜಪ್ಪ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನಲ್ಲಿ ಟ್ರ್ಯಾಕ್ಟರ್ ಗಾಗಿ 3 ಲಕ್ಷ ಸಾಲ ಸೇರಿದಂತೆ ಕೆಲವಡೆ ಸಾಲ ಮಾಡಿಕೊಂಡಿದ್ದ. ಆದ್ರೆ ಸಾಲವನ್ನು ಮರು ಪಾವತಿಸಲಾಗದೇ ಹೊಲದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತ ಸುದ್ದಿ ತಿಳಿಯುತ್ತಿದ್ದಂತೆ ಗುಳೇದಗುಡ್ಡ ವಲಯದ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಕೆರೂರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ.

Next Story

RELATED STORIES