Top

ತಿರುಚ್ಚಿ ದೇಗುಲದಲ್ಲಿ ಮದವೇರಿದ ಆನೆಗೆ ಮಾವು ಬಲಿ

ತಿರುಚ್ಚಿ ದೇಗುಲದಲ್ಲಿ ಮದವೇರಿದ ಆನೆಗೆ ಮಾವು ಬಲಿ
X

ತಮಿಳುನಾಡು : ಇಂದು ಭಯಾನಕ ಘಟನೆಯೊಂದಕ್ಕೆ, ತಮಿಳುನಾಡಿ ತಿರುಚಿಯ ಸಮಯಪುರಂ ದೇಗುಲ ಸಾಕ್ಷಿಯಾಯಿತು. ಮದವೇರಿದ ಆನೆಯೊಂದು ಎಲ್ಲರೂ ನೋಡ ನೋಡುತ್ತಿದ್ದಂತೆ, ಮಾವುತನನ್ನು ತುಳಿದು ಭೀಕರವಾಗಿ ಸಾಯಿಸಿದ ಘಟನೆ ನಡೆದಿದೆ.

ತಿರುಚಿಯ ಸಮಯಪುರಂ ದೇಗುಲದಲ್ಲಿ 9 ವರ್ಷದಿಂದ ಗಜೇಂದ್ರ ಎಂಬ ಆನೆಯನ್ನು ಸಾಕಲಾಗಿತ್ತು. ಈ ಆನೆಯನ್ನು 50 ವರ್ಷದ ಮಸಿನಿ ಎಂಬ ಮಾವುತ ನೋಡಿಕೊಳ್ಳುತ್ತಿದ್ದ. ಆದರೇ ಅದೇನಾಯಿತೋ ಗೊತ್ತಿಲ್ಲ. ಇಂದು ಏಕಾಏಕಿ ಮಾವುತನ ಮೇಲೆ ಆರ್ಭಟಿಸಿ ಅಬ್ಬರಿಸಿದ ದೇವಾಲಯದ ಆನೆ. ಎಲ್ಲರ ಕಣ್ಣೆದುರಿಗೆ, ಮಾವುತನನ್ನು ತುಳಿದು ತುಳಿದು ಸಾಯಿಸಿ ಬಿಟ್ಟಿದೆ. ಅಲ್ಲದೇ ಮಾವುತನನ್ನು ಬಿಡಿಸಲು ಹೋದ ಇಬ್ಬರು ಭಕ್ತಾದಿಗಳನ್ನು ಗಾಯಗೊಳಿಸಿದೆ.

ಈ ವೀಡಿಯೋ ಈಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಘಟನೆಯ ನಂತ್ರ, ಸಮಯಪುರಂ ದೇವಾಲಯವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಲ್ಲದೇ ಮದವೇರಿದ ಆನೆಯಿಂದ ಮಾವುತನ ಮೃತದೇವನ್ನು ಪಡೆದು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದ್ದು. ಆನೆಯನ್ನು ಹತೋಟಿಗೆ ತರಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

Next Story

RELATED STORIES