ಗೋಲ್ಡನ್ ಸ್ಟಾರ್ ಹೊಸ ಚಿತ್ರಕ್ಕೆ ಡೈರೆಕ್ಟರ್ ಫಿಕ್ಸ್

ಚಮಕ್ ಸಿನಿಮಾ ಸಕ್ಸಸ್ ಅಲೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಆರೆಂಜ್ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಆರೆಂಜ್ ನಂತ್ರ ಗಣಿ ಯಾವ ಚಿತ್ರದಲ್ಲಿ ಬಣ್ಣ ಹಚ್ತಾರೆ ಅನ್ನೋ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಗೋಲ್ಡನ್ ಸ್ಟಾರ್ ಈ ಬಾರಿ ಹೊಸ ಪ್ರತಿಭೆಗೆ ಅವಕಾಶ ಕೊಟ್ಟಿರೋದು ವಿಶೇಷ. ವಿಜಯ್ ನಾಗೇಂದ್ರ ಅನ್ನೋ ಪ್ರತಿಭಾನ್ವಿತ ನಿರ್ದೇಶಕ ಗಣೇಶ್ ಅಭಿನಯದ ಮುಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ವಿಜಯ್ ನಾಗೇಂದ್ರ ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ, ರಾಜಕುಮಾರ ಸಿನಿಮಾಗಳ ಖ್ಯಾತಿಯ ಸಂತೋಷ್ ಆನಂದ್ ರಾಮ್ ತಂಡದ ಸದಸ್ಯ. ಈ ಎರಡೂ ಚಿತ್ರಕ್ಕೆ ವಿಜಯ್ ನಾಗೇಂದ್ರ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಬಹಳ ದಿನಗಳಿಂದ ಗಣೇಶ್ಗಂತ್ಲೇ ಅವರು ಒಂದು ಕಥೆ ಸಿದ್ಧಪಡಿಸಿಕೊಂಡ್ರಂತೆ. ಕಥೆ ಕೇಳಿದ ಗೋಲ್ಡನ್ ಸ್ಟಾರ್ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೆಚ್. ಎಲ್. ಎನ್ ರಾಜ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಅಭಿಮಾನಿಗಳು ತಮ್ಮನ್ನ ಯಾವ ರೀತಿ ನೋಡೋಕೆ ಇಷ್ಟಪಡ್ತಾರೋ ಆ ರೀತಿ ಗಣಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಟೈಟಲ್ ಸೇರಿದಂತೆ ಇನ್ನುಳಿದ ಅಪ್ಡೇಟ್ಸ್ ಮುಂದಿನ ತಿಂಗಳು ಸಿಗಲಿದೆ. ಇನ್ನು ಚಿತ್ರವನ್ನ ನಿರ್ದೇಶಿಸುತ್ತಿರೋ ವಿಜಯ್ ನಾಗೇಂದ್ರ ಅವರಿಗೆ ಗಣೇಶ್ ಶುಭಾಶಯ ತಿಳಿಸಿದ್ದಾರೆ. ತಮ್ಮ ತಂಡದ ಸದಸ್ಯ ಗೋಲ್ಡನ್ ಸ್ಟಾರ್ ಸಿನಿಮಾ ನಿರ್ದೇಶಿಸುತ್ತಿರೋದಕ್ಕೆ ಸಂತೋಷ್ ಆನಂದ್ ರಾಮ್ ಸಹ ಸಂತಸ ವ್ಯಕ್ತಪಡಿಸಿದ್ದು, ಫೇಸ್ಬುಕ್ ಮೂಲಕ ಚಿತ್ರಕ್ಕೆ ಶುಭಾಶಯ ಕೋರಿದ್ದಾರೆ.