Top

ಹೇಗಿದೆ ಗೊತ್ತಾ ದೀಪಿಕಾ ಪಡುಕೋಣೆ ವೆಡ್ಡಿಂಗ್ ಶಾಪಿಂಗ್..?!

ಹೇಗಿದೆ ಗೊತ್ತಾ ದೀಪಿಕಾ ಪಡುಕೋಣೆ ವೆಡ್ಡಿಂಗ್ ಶಾಪಿಂಗ್..?!
X

ಬಾಲಿವುಡ್​​​ನ ಫೇಮಸ್ ಆನ್ ಸ್ಕ್ರೀನ್ ​ಲವ್​​​ ಬರ್ಡ್ಸ್ ದೀಪಿಕಾ ಪಡುಕೋಣೆ ಹಾಗೂ ರಣ್​ವೀರ್​ಸಿಂಗ್ ಆಫ್ ಸ್ಕ್ರೀನ್ ಪ್ರೇಮ್​​ ಕಹಾನಿ ಎಲ್ಲಾರಿಗೂ ಗೊತ್ತಿರುವ ವಿಷಯ. ಇಬ್ಬರು ಮದುವೆ ಯಾಗ್ತಾರೆ ಅನ್ನೋದು ಸದ್ಯಕ್ಕೆ ಬಿಟೌನ್​​​ನಲ್ಲಿ ಹಳಸದ ಫ್ರೆಶ್​ ಸ್ಟೋರಿ. ಈಗ ಆ ಮಾತಿಗೆ ಮತ್ತೊಂದು ಪುಷ್ಠಿ ಸಿಕ್ಕಿದೆ. ದೀಪಿಕಾ ಮತ್ತು ರಣ್​ವೀರ್​ ಮದುವೆಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಅನ್ನೋ ಬ್ರೇಕಿಂಗ್​ ನ್ಯೂಸ್ ಬ್ರೇಕ್​​ ಆಗಿದೆ.

ಹೌದು..ಬಿಟೌನ್​​ ಮಸ್ತಾನಿ ಜೋಡಿಗಳಿಬ್ಬರು ಸಪ್ತಪದಿ ತುಳಿಯಲು ಭರ್ಜರಿಯಾಗಿ ತಯಾರಾಗುತ್ತಿದ್ದಾರೆ. ಅದ್ರಲ್ಲೂ ಕನ್ನಡತಿ ದೀಪಿಕಾ, ಮದುವೆಗಾಗಿ ಪ್ರತಿಷ್ಠಿತ ಮಳಿಗೆಯಲ್ಲಿ ದುಬಾರಿ ಆಭರಣಗಳನ್ನು ಖರೀದಿಸಿದ್ದಾರಂತೆ. ಇದಕ್ಕೂ ಬಿಗ್​​ ಬ್ರೇಕಿಂಗ್ ನ್ಯೂಸೇನು ಗೊತ್ತಾ..? ದೀಪಿಕಾ-ರಣ್​ವೀರ್ ಮದುವೆ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್​​ ಆಗಿದೆಯಂತೆ.

ಮೂಲಗಳ ಪ್ರಕಾರ ಡಿಪ್ಪಿ-ರಣ್​ವೀರ್ ಕಲ್ಯಾಣೋತ್ಸವ ನವೆಂಬರ್​ 19ಕ್ಕೆ ನಿಗದಿಯಾಗಿದೆ ಅನ್ನೋ ಮಾತು ಕಾಡ್ಗಿಚ್ಚಿನಂತೆ ಹರಿದಾಡ್ತಿದೆ. ನವೆಂಬರ್18ರಿಂದ ಶುರುವಾಗುವ ಡಿಪ್ಪಿ-ರಣ್​ವೀರ್ ಮದುವೆ ಸಂಭ್ರಮ 3 ದಿನಗಳ ಕಾಲ ನಡೆಯುತ್ತಂತೆ. ಇದಕ್ಕೆ ಎರಡು ಕುಟುಂಬದವರು ಸಮ್ಮತಿ ಸೂಚಿಸಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿದೆ. ಹಿಂದೆ ಈ ಲವ್ ಬರ್ಡ್ಸ್ ಮದುವೆ ಶ್ರೀಲಂಕಾದ ಕೊಲಂಬೋದಲ್ಲಿ ನಡೆಯಲಿದೆ ಎನ್ನಲಾಗಿತ್ತು. ಈ ಬಗ್ಗೆ ಮಸ್ತಾನಿ ಜೋಡಿ ಅಧಿಕೃತ ಮಾಹಿತಿ ನೀಡಬೇಕಿದ್ದು , ಅಲ್ಲಿಯ ತನಕ ಎಲ್ಲವೂ ಅಂತೆ ಕಂತೆಗಳ ಸಂತೆ ಅಷ್ಟೆ.

Next Story

RELATED STORIES