ಯಂಗ್ ರೆಬಲ್ ಸ್ಟಾರ್ ಸಿನಿಮಾಕ್ಕೆ ಮುಹೂರ್ತ ಫಿಕ್ಸ್..

ಸ್ಯಾಂಡಲ್ವುಡ್ನ ಖ್ಯಾತ ನಟ ರೆಬಲ್ ಸ್ಟಾರ್ ಅಂಬರೀಶ್ರವರ ಸುಪುತ್ರ ಅಭಿಷೇಕ್ ಬೆಳ್ಳಿತೆರೆಗೆ ಬಲಗಾಲ್ಲಿಟ್ಟು ಬರುವ ಸಿನಿ ಮುಹೂರ್ತ ಫಿಕ್ಸ್ ಆಗಿದೆ. ಇಷ್ಟುದಿನ ಅಂಬಿ ಮಗನ ಸಿನಿಮಾದ ಬಗ್ಗೆ ಗಾಂಧಿನಗರದ ಗಗನದಲ್ಲಿ ಗಾಳಿಪಟವಾಗಿ ಹಾರಡುತ್ತಿದ್ದ ಅಂತೆ ಕಂತೆಗಳ ಸಂತೆಗೆ ಇತಿಶ್ರೀ ಹಾಡುವ ಸುಸಂದರ್ಭ ಬಂದಿದೆ. ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ನಟಿಸುತ್ತಿರುವ ಚೊಚ್ಚಲ ಸಿನಿಮಾ ‘ಅಮರ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ. ಪೋಸ್ಟರ್ನಲ್ಲಿ ಸಖತ್ ಹ್ಯಾಂಡ್ಸಮ್ ಆಗಿ , ಎಂಗ್ ಆಂಡ್ ಎರ್ನಾಜಿಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.
ಅಭಿಷೇಕ್ ಅಂಬರೀಶ್ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸುತ್ತಿರುವ ಅಮರ್ ಚಿತ್ರದ ಮೊಟ್ಟಮೊದಲ ಪೋಸ್ಟರ್ ಇದು. ಸಂಜು ವೆಡ್ಸ್ ಗೀತಾ, ಮೈನಾ, ಮಾಸ್ತಿಗುಡಿ ಖ್ಯಾತಿಯ ನಾಗಶೇಖರ್ ಪರಿಕಲ್ಪನೆಯಲ್ಲಿ ಅಮರ್ ಚಿತ್ರ ಮೂಡಿಬರಲಿದೆ. ಖ್ಯಾತ ನಿರ್ಮಾಪಕ ಹಾಗೂ ಅಂಬರೀಶ್ರವರ ಆಪ್ತ ಸ್ನೇಹಿತರಲ್ಲೊಬ್ಬರಾದ ಸಂದೇಶ್ ನಾಗರಾಜ್ ಅಮರ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಶ್ರವರ ಬರ್ತ್ಡೇಗೆ ಒಂದು ದಿನ ಮುಂಚಿತವಾಗಿ ಗಿಫ್ಟ್ ರೂಪದಲ್ಲಿ ಅಮರ್ ಚಿತ್ರ ಲಾಂಚ್ ಆಗಲಿದೆ. ಅಂದಹಾಗೆ ಅಂಬಿ ಬರ್ತ್ಗೆ ದಿನ ಅಂದ್ರೆ ಮೇ29ನೇ ತಾರಿಖ್ ಈ ಚಿತ್ರವನ್ನು ಅದ್ಧೂರಿಯಾಗಿ ಲಾಂಚ್ ಮಾಡಬೇಕು ಅನ್ನೋ ಪ್ಲಾನ್ನಲ್ಲಿ ಸಂದೇಶ್ ನಾಗರಾಜ್ ಇದ್ರು. ಆದ್ರೆ ಅಂಬಿ ಬರ್ತ್ಡೇ ಮಂಗಳವಾರ ಬರೋದ್ರಿಂದ ಸೋಮವಾರವೇ ಚಿಕ್ಕದಾಗಿ ಪೂಜೆ ಮಾಡಿ ಅಮರ್ ಚಿತ್ರಕ್ಕೆ ಚಾಲನೆ ಕೊಡಲಿದ್ದಾರೆ. ಮುಂದಿನ ದಿನಗಳಲ್ಲಿ ಅದ್ಧೂರಿಯಾಗಿ ಇನ್ಡೋರ್ ಸ್ಟೇಡಿಯಂನಲ್ಲಿ ಅಮರ್ ಚಿತ್ರದ ಕಾರ್ಯಕ್ರಮ ಮಾಡುವ ಯೋಜನೆಯಲ್ಲಿ ಸಂದೇಶ್ ನಾಗರಾಜ್ ಇದ್ದಾರೆ.