ತಂದೆಯ ಹತ್ಯೆ ಸುದ್ದಿ ಕೇಳಿ ತವರಿಗೆ ಮರಳಿದ ಆಲ್ರೌಂಡರ್ ಧನಂಜಯ್

X
TV5 Kannada25 May 2018 5:19 AM GMT
ಕೊಲಂಬೊ : ತನ್ನ ತಂದೆಯನ್ನ ಅನಾಮಿಕ ವ್ಯಕ್ತಿಗಳು ಗುಂಡಿಟ್ಟು ಕೊಂದು ಹಾಕಿದ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಆಲ್ರೌಂಡರ್ ಧನಂಜಯ ಡಿ’ಸಿಲ್ವಾ ವೆಸ್ಟ್ಇಂಡೀಸ್ ಸರಣಿಯನ್ನ ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ ತವರಿಗೆ ಮರಳಿದ್ದಾರೆ ಎಂದು ಶ್ರೀಲಂಕಾ ಪೊಲೀಸರು ತಿಳಿಸಿದ್ದಾರೆ.
ಲಂಕಾ ತಂಡದ ಅಗ್ರ ಬ್ಯಾಟ್ಸ್ಮನ್ ಧನಂಜಯ ಅವರ ತಂದೆ ರಂಜನ್ ಸ್ಥಳೀಯ ರಾಜಕಾರಣಿಯಾಗಿದ್ದರು. ನಿನ್ನೆ ಕೊಲಂಬಾ ಬಳಿ ಇರುವ ರತಮಲಾನಾದಲ್ಲಿ ಅನಾಮಿಕ ವ್ಯಕ್ತಿಯೊಬ್ಬನ ಗುಂಡಿಗೆ ಬಲಿಯಾದ್ರು. ತವರಿಗೆ ವಾಪಸ್ ಮರಳಿರುವ ಧನಂಜಯ್ ವೆಸ್ಟ್ ಇಂಡೀಸ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳನ್ನ ಆಡಬೇಕಿತ್ತು.
Next Story