Top

ಸ್ಪೀಕರ್ ಆಗಿ ಕಾಂಗ್ರೆಸ್‌ನ ರಮೇಶ್ ಕುಮಾರ್ ವಿರೋಧವಾಗಿ ಆಯ್ಕೆ

ಸ್ಪೀಕರ್ ಆಗಿ ಕಾಂಗ್ರೆಸ್‌ನ ರಮೇಶ್ ಕುಮಾರ್ ವಿರೋಧವಾಗಿ ಆಯ್ಕೆ
X

ಬೆಂಗಳೂರು : ಇಂದು 15ನೇ ವಿಧಾನಸಭೆಯ ಮೊದಲ ವಿಧಾನಸಭಾ ಕಲಾಪ ಆರಂಭವಾಗಿದೆ. ಇಂದು ನಡೆಯ ಬೇಕಿದ್ದ ಸ್ಪೀಕರ್ ಹುದ್ದೆಯ ಸ್ಥಾನಕ್ಕೆ, ಬಿಜೆಪಿಯಿಂದ ಶಾಸಕ ಸುರೇಶ್ ಕುಮಾರ್, ಕಾಂಗ್ರೆಸ್‌ನಿಂದ ಶಾಸಕ ರಮೇಶ್‌ ಕುಮಾರ್ ಕಳೆದ ನಿನ್ನೆ ನಾಮಪತ್ರ ಸಲ್ಲಿಸಿದ್ದರು. ಇಂದು ಬಿಜೆಪಿಯ ಶಾಸಕ ಸುರೇಶ್‌ ಕುಮಾರ್ ತಮ್ಮ ನಾಮಪತ್ರ ಹಿಂತೆಗೆದುಕೊಂಡ ಹಿನ್ನಲೆಯಲ್ಲಿ, ಕಾಂಗ್ರೆಸ್‌ನ ಶಾಸಕ ರಮೇಶ್‌ ಕುಮಾರ್ ಅವಿರೋಧವಾಗಿ ಸ್ಪೀಕರ್ ಆಗಿ ನೇಮಕಗೊಂಡಿದ್ದಾರೆ.

ಕಳೆದ ನಿನ್ನೆ ಬಿಜೆಪಿಯ ಶಾಸಕ ಸುರೇಶ್ ಕುಮಾರ್, ವಿಧಾನಸಭಾ ಕಾರ್ಯದರ್ಶಿ ಎಸ್ ಮೂರ್ತಿಗೆ ಸ್ಪೀಕರ್ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‌ನಿಂದ ರಮೇಶ್ ಕುಮಾರ್, ಕೂಡ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆಗೆ ತೆರಳಿ ಕಾರ್ಯದರ್ಶಿಯವರಿಗೆ ನಾಮಪತ್ರ ಸಲ್ಲಿಸಿದ್ದರು.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರಿಂದಾಗಿ, ಸ್ಪೀಕರ್‌ ಸ್ಥಾನಕ್ಕೆ ಪ್ರಭಲ ಸ್ಪರ್ಧೆ ಉಂಟಾಗಿತ್ತು. ಆದರೇ ಇಂದು ನಾಮಪತ್ರ ಬಿಜೆಪಿಯ ಸುರೇಶ್ ಕುಮಾರ್ ಹಿಂತೆಗೆದುಕೊಂಡಿರುವುದಾಗಿ, ಟ್ವಿಟರ್ ಮೂಲಕ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ, ಕಾಂಗ್ರೆಸ್‌ನ ರಮೇಶ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಬಗ್ಗೆ ಇಂದು ಸದನ ಆರಂಭವಾಗುತ್ತಿದ್ದಂತೆ ಹಂಗಾಮಿ ಸ್ಪೀಕರ್ ಕೆ ಜಿ ಬೋಪಯ್ಯ ಪ್ರಕಟಸುವ ಮೂಲಕ, ತಮ್ಮ ಸ್ಥಾನವನ್ನು ರಮೇಶ್‌ ಕುಮಾರ್ ಅವರಿಗೆ ಬಿಟ್ಟುಕೊಟ್ಟರು. ಈ ಮೂಲಕ 15ನೇ ವಿಧಾನಸಭೆಯ ಸ್ಪೀಕರಲ್ ಆಗಿ ಕಾಂಗ್ರೆಸ್‌ನ ರಮೇಶ್‌ ಕುಮಾರ್ ಅಧಿಕಾರ ಸ್ಪೀಕರಿಸಿದರು.

Next Story

RELATED STORIES