Top

ಚಾಮಯ್ಯ ಮೇಷ್ಟ್ರು ಬದುಕಿದ್ದಿದ್ದರೆ 93 ವರ್ಷ ವಯಸ್ಸಾಗಿರುತ್ತಿತ್ತು

ಚಾಮಯ್ಯ ಮೇಷ್ಟ್ರು ಬದುಕಿದ್ದಿದ್ದರೆ 93 ವರ್ಷ ವಯಸ್ಸಾಗಿರುತ್ತಿತ್ತು
X

ಚಂದನವನದ ಹಿರಿಯ ಕಲಾಚೇತನ , ಸಜ್ಜನ ಶಿರೋಮಣಿ ಕೆ.ಎಸ್ ಅಶ್ವತ್ಥ್. ಇವ್ರು ನಮ್ಮನ್ನ ಅಗಲಿ 8 ವರ್ಷವಾಗಿದ್ರು ಇವರ ನೆನಪು ಮಾತ್ರ ಅಭಿಮಾನಿಗಳಲ್ಲಿ ಅಜರಾಮರ. 1925 ಮೇ 25ರಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕರಗನ ಹಳ್ಳಿಯಲ್ಲಿ ಜನಿಸಿದರು. ಕೆ.ಎಸ್.ಅಶ್ವತ್ಥ್ ಸಿನಿಮಾ ರಂಗಕ್ಕೆ ಬರುವ ಮುನ್ನ ಸರ್ಕಾರಿ ಸ್ವಾಮ್ಯದ ಆಹಾರ ಇಲಾಖೆಯಲ್ಲಿ ಕೆಲಸ ಮಾಡಿದ್ದರು. ರಂಗಭೂಮಿಯ ಕಲಾವಿದರಾಗಿದ್ದ ಅಶ್ವತ್ಥ್ ರವರಿಗೆ ಕಲಾ ಸರಸ್ವತಿ ಕೈ ಬೀಸಿ ಕರೆದಳು. 1955ರಲ್ಲಿ ಸ್ತ್ರೀ ರತ್ನ ಚಿತ್ರದ ಮೂಲಕ ಚಂದನವನಕ್ಕೆ ಪಾರ್ದಪಣೆ ಮಾಡಿದರು. ಅಲ್ಲಿಂದ ಅಶ್ವತ್​ ನಾರಾಯಣರವರು ಹಿಂತಿರುಗಿ ನೋಡಲೆ ಇಲ್ಲ.

ಸತತ 55 ವರ್ಷ ಬಣ್ಣದ ಬದುಕಿನಲ್ಲಿ ಸರಳವಾಗಿ , ಸ್ವಾಭಿಮಾನದಿಂದ ಬದುಕಿದವರು ಶ್ರೀಯುತ ಕೆ.ಎಸ್.ಅಶ್ವತ್ಥ್. ಕಲಾತ್ಮಕವಾಗಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಅಶ್ವತ್ಥ್, ಅರ್ಥಿಕವಾಗಿ ಸಂಪಾದಿಸಿದ್ದು ಮೈಸೂರಿನಲ್ಲಿರುವ ಒಂದು ಮನೆ ಮಾತ್ರ. ಇದ್ದಷ್ಟು ಕಾಲ ನಿರ್ಮಾಪಕರಿಗೆ ನಷ್ಟ ಮಾಡದಂತೆ ತಮ್ಮಗೆ ತಕ್ಕ ಮಾರುಕಟ್ಟೆಯ ರೀತಿ ಸಂಭಾವನೆ ಪಡೆದವರು ಅಶ್ವತ್ಥ್. ಎಷ್ಟೋ ನಿರ್ಮಾಪಕರಿಗೆ ನಿಗದಿ ಸಮಯಕ್ಕಿಂತ ಬೇಗ ಶೂಟಿಂಗ್ ಮುಗಿದ್ರೆ , ಮಿಕ್ಕ ಹಣವನ್ನು ವಾಪಸ್​ ಕೊಟ್ಟ ಉದಾಹರಣೆಗಳನ್ನು ಬಹಳ ಜನ ನಿರ್ಮಾಪಕರು ಹೇಳಿದ್ದಾರೆ.

ಪೋಷಕ ಪಾತ್ರಗಳಿಗೆ ಹೆಸರು ವಾಸಿಯಾಗಿದ್ದ ಅಶ್ವತ್ಥ್, ಬರೋಬ್ಬರಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ಅಮೋಘ ಅಭಿನಯವನ್ನು ಮಾಡಿದ್ದಾರೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದ ಚಾಮಯ್ಯ ಮೇಸ್ಟ್ರು ಪಾತ್ರ ಇಂದಿಗೂ ಜೀವಂತ. ಚಾಮಯ್ಯ ಮೇಸ್ಟ್ರು ರೀತಿಯ ಸಾಕಷ್ಟು ಪಾತ್ರಗಳಿಗೆ ಜೀವ ತುಂಬಿ ಜೀವನ ಕಳೆದ್ದಿದ್ದಾರೆ ಅಶ್ವತ್ಥ್. ಇಂತಹ ಮಹಾನ್ ನಟನಿಗೆ ನಿಮ್ಮೆಲ್ಲರ ಪರವಾಗಿ ನಮ್ಮ ಕಡೆಯಿಂದ ಹ್ಯಾಟ್ಸ್ ಆಫ್.

Next Story

RELATED STORIES