Top

ಮೇಜರ್ ಗೊಗೊಯಿ ತಪ್ಪು ಮಾಡಿದ್ದರೆ ಕಠಿಣ ಕ್ರಮ : ಬಿಪಿನ್ ರಾವತ್

ಮೇಜರ್ ಗೊಗೊಯಿ ತಪ್ಪು ಮಾಡಿದ್ದರೆ ಕಠಿಣ ಕ್ರಮ : ಬಿಪಿನ್ ರಾವತ್
X

ನವದೆಹಲಿ : ಮೇಜರ್ ಗೊಗೊಯಿ ತಪ್ಪು ಮಾಡಿದ್ದು ಸಾಬೀತಾದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಕಳೆದ ನಿನ್ನೆ ಮೇಜರ್ ಗೊಗೊಯಿ, ಹೋಟೆಲ್ ಒಂದರಲ್ಲಿ ರೂಂ ಬುಕ್ ಮಾಡಿದ್ದರು. ಈ ರೂಮ್‌ ಒಬ್ಬರಿಗೆ ಮಾತ್ರ ನೀಡಲಾಗಿತ್ತು. ಆದರೇ ಗೊಗೊಯಿ, ತನ್ನೊಡನೆ ಯುವತಿಯೊಬ್ಬಳನ್ನು ಕರೆತಂದಿದ್ದರು. ಈ ಬಗ್ಗೆ ಹೋಟೆಲ್ ಮಾಲೀಕರು ಆಕ್ಷೆಪ ವ್ಯಕ್ತಪಡಿಸಿದ್ದರು. ಹೋಟೆಲ್ ಮಾಲೀಕರು, ಮತ್ತು ಮೇಜರ್ ಗೊಗೊಯಿ ನಡುವೆ ಮಾತಿನ ವಾಗ್ವಾದ ನಡೆದಿತ್ತು.

ಪರಿಸ್ಥಿತಿ ಕೈ ಮೀರಿದಾಗ, ಹೋಟೆಲ್‌ನವರು ಪೊಲೀಸರಿಗೆ ಮಾಹಿತಿ ಮುಚ್ಚಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಮೇಜರ್ ಗೊಗೊಯಿ ಅವರನ್ನು ಪ್ರಶ್ನಿಸಿ, ಸ್ಥಳೀಯ ಹುಡುಗಿಯನ್ನು ರೂಂಗೆ ಕರೆತಂದಿದ್ದರ ಬಗ್ಗೆ ಆಕ್ಷೇಪಿಸಿದರು. ಅಲ್ಲದೇ, ಹನಿಟ್ರಾಫ್ ಅಥವಾ ಪಾಕಿಸ್ತಾನಕ್ಕೆ ಮಾಹಿತಿ ನೀಡುವ ಬಾತ್ನಿದಾರಳೋ ಎಂಬ ಶಂಕೆ ವ್ಯಕ್ತಪಡಿಸಿದ್ದರು.

ಈ ಎಲ್ಲಾ ಘಟನೆಯು ಮಾಧ್ಯಮಗಳಲ್ಲಿ ಬಿತ್ತರವಾದಂತೆ, ಈ ಕುರಿತು ಮಾತನಾಡಿದ ಅವರು, ಭಾರತೀಯ ಸೇನೆಯಲ್ಲಿ ಯಾವುದೇ ಹುದ್ದೆಯಲ್ಲಿರುವ ಯಾರೇ ತಪ್ಪು ಮಾಡಿದರು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಇತರರಿಗೆ ಮಾದರಿಯಾಗುವಂತಹ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ.

Next Story

RELATED STORIES