Top

ಹತ್ತು ಹಲವು ಕಥೆ ಹೇಳ್ತಿದೆ 777 ಚಾರ್ಲಿ ಪೋಸ್ಟರ್..!

ಹತ್ತು ಹಲವು ಕಥೆ ಹೇಳ್ತಿದೆ 777 ಚಾರ್ಲಿ ಪೋಸ್ಟರ್..!
X

ಕಿರಿಕ್ ಪಾರ್ಟಿ ಸಕ್ಸಸ್​​ ನಂತ್ರ ರಕ್ಷಿತ್ ಶೆಟ್ಟಿ ಕೊಂಚ ಸೈಲೆಂಟ್ ಆದಂತೆ ಕಾಣಿಸ್ತಿತ್ತು. ಅವನೇ ಶ್ರೀಮನ್ನಾರಾಯಣ ಸಿನಿಮಾ ಸೆಟ್ಟೇರಿದ ಮೇಲೆ ಅಭಿಮಾನಿಗಳು ಕೊಂಚ ನಿರಾಳರಾಗಿದ್ದರು. ಆ ಗ್ಯಾಪ್​​ನಲ್ಲೇ 777 ಚಾರ್ಲಿ ಚಿತ್ರದಲ್ಲೂ ರಕ್ಷಿತ್ ಶೆಟ್ಟಿ ನಟಿಸಬೇಕಾಗಿ ಬಂತು. ಅಂತೂ ಸಿಂಪಲ್ ಸ್ಟಾರ್ ಕೈಯಲ್ಲಿ ಈಗ ಎರಡು ಸಿನಿಮಾಗಳಿವೆ. ಒಂದು ನಾಯಿ ಮತ್ತು ಹೀರೋ ಸುತ್ತಾ ಸುತ್ತುವ 777 ಚಾರ್ಲಿ ಚಿತ್ರದ ಟೈಟಲ್ ಪೋಸ್ಟರ್ ಇದೀಗ ರಿವೀಲ್ ಆಗಿದೆ.

ಮೊದಲಿಗೆ ರಕ್ಷಿತ್ ಶೆಟ್ಟಿ ಈ ಚಿತ್ರದ ನಿರ್ಮಾಣ ಜವಾಬ್ದಾರಿ ಮಾತ್ರ ವಹಿಸಿಕೊಂಡಿದ್ದರು. ಫೋಟೋ ಶೂಟ್ ಎಲ್ಲಾ ಮುಗಿದ ಮೇಲೆ ಚಿತ್ರದಿಂದ ಹೀರೋ ಅರವಿಂದ್ ಅಯ್ಯರ್ , ಹೊರ ನಡೆಯಬೇಕಾಗಿ ಬಂತು. ಆದ್ರೆ, ಕಥೆ ಮೇಲೆ ಸಿಕ್ಕಾಪಟ್ಟೆ ನಂಬಿಕೆ ಇಟ್ಟುಕೊಂಡಿದ್ದ ರಕ್ಷಿತ್ ತಾವೇ ಹೀರೋ ಆಗಿ ನಟಿಸೋಕೆ ಮನಸ್ಸು ಮಾಡಿದ್ದಾರೆ. ರಕ್ಷಿತ್ ಪುಟ್ಟ ನಾಯಿಮರಿ ಜೊತೆಗಿರೋ ಒಂದಷ್ಟು ಫೋಟೊ, ವೀಡಿಯೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ.

ಇದೀಗ ರಕ್ಷಿತ್ ಶೆಟ್ಟಿ 777 ಚಾರ್ಲಿ ಅಫೀಷಿಯಲ್ ಟೈಟಲ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಡಿಸೈನ್ ಆಗಿರುವ ಈ ಪೋಸ್ಟರ್ಸ್ ಸಿಂಪ್ಲಿ ಸೂಪರ್ ಅನ್ನುವಂತಿದೆ. ನಾಯಿ ಕುತ್ತಿಗೆಗೆ ಹಾಕುವ ಚೈನ್​​ ಮತ್ತು ಡಾಲರ್ ರೀತಿ ಡಿಸೈನ್ ಮಾಡಿರೋ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ. ಡಾಲರ್​ನಲ್ಲಿ ಹೀರೋ ಬೈಕ್ ಏರಿ ಸವಾರಿ ಮಾಡುವ ಚಿತ್ರವನ್ನ ನೋಡಬಹುದು.

ಖಿನ್ನತೆಗೆ ಒಳಗಾದ ಯುವಕನ ಬದುಕಿಗೆ ಒಂದು ಲ್ಯಾಬ್ರಡಾರ್ ನಾಯಿಯ ಪ್ರವೇಶವಾಗುತ್ತೆ. ಆ ನಂತ್ರ ಆತನ ಬದುಕು ಹೇಗೆಲ್ಲಾ ತಿರುವ ಪಡೆದುಕೊಳ್ಳುತ್ತೆ ಅನ್ನೋದು 777 ಚಾರ್ಲಿ ಚಿತ್ರದ ಒನ್​ ಲೈನ್​ ಸ್ಟೋರಿ. ರಿಷಬ್ ಶೆಟ್ಟಿ ಅಸಿಸ್ಟೆಂಟ್ ಕಿರಣ್ ರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ರಕ್ಷಿತ್ ಶೆಟ್ಟಿ ಶ್ರೀಮನ್ನಾರಾಯಣ ಚಿತ್ರದ ಜೊತೆಜೊತೆಗೆ ಈ ಚಿತ್ರದ ಶೂಟಿಂಗ್ ಮುಗಿಸೋ ಲೆಕ್ಕಾಚಾರದಲ್ಲಿದ್ದಾರೆ.

Next Story

RELATED STORIES