Top

ಕೊಹ್ಲಿ ಚಾಲೆಂಜ್ ಸ್ವೀಕರಿಸಿದ ಪ್ರಧಾನಿ ಮೋದಿ

ಕೊಹ್ಲಿ ಚಾಲೆಂಜ್ ಸ್ವೀಕರಿಸಿದ ಪ್ರಧಾನಿ ಮೋದಿ
X

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಫಿಟ್ ನೆಸ್ ಚಾಲೆಂಜ್‍ನ್ನ ಸ್ವೀಕರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ನಾನು ಫಿಟ್ ಆದ್ರೆ ದೇಶ ಫಿಟ್, ನಿಮ್ಮ ಫಿಟ್ನೆಸ್‍ ಗೆ ಸಂಭಂಧಪಟ್ಟ ಕೆಲ ವಿಡಿಯೋ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅಗ್ರ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ನಟ ಹೃತಿಕ್ ರೋಶನ್‍ಗೆ ಫಿಟ್ ನೆಸ್ ಚಾಲೆಂಜ್ ನೀಡಿದ್ದರು.

ಈ ವಿಡಿಯೋ ನೋಡಿದ ವಿರಾಟ್ ಕೊಹ್ಲಿ ಚಾಲೆಂಜ್ ಸ್ವೀಕರಿಸಿ,ನಂತರ ಪ್ರಧಾನಿ ಮೋದಿ, ತಂಡದ ಆಟಗಾರ ಧೋನಿ,ತಮ್ಮ ಪತ್ನಿ ಅನುಷ್ಕಾಗೆ ಚಾಲೆಂಜ್ ಹಾಕಿದ್ದಾರೆ. ಇದೀಗ ಪ್ರಧಾನಿ ಮೋದಿ ಅವರು ವಿರಾಟ್ ಕೊಹ್ಲಿ ಅವರ ಚಾಲೆಂಜ್‍ನ್ನ ಸ್ವೀಕರಿಸಿದ್ದು ತಮ್ಮ ಫಿಟ್ನೆಸ್ ಕುರಿತ ವಿಡಿಯೊವನ್ನ ಅಪ್‍ಲೋಡ್ ಮಾಡುವುದಾಗಿ ಹೇಳಿದ್ದಾರೆ.

Next Story

RELATED STORIES